37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾಸಮ್ಮೇಳನ ಉದ್ಘಾಟನೆ

ಉಜಿರೆ: ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೇ 12 ರಿಂದ ಮೇ 16ರವರೆಗೆ ನಡೆಯಲಿರುವ ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ -೨೦೨೫ರ ಮಹಾಸಮ್ಮೇಳನ , ಇದರ ಉದ್ಘಾಟನಾ ಸಮಾರಂಭವು ಮೇ 12ರಂದು ನಡೆಯಿತು.

ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾ ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ, ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಆತಿಥಿಗಳಾಗಿ ಬೆಂಗಳೂರು ಎಸ್‌ವಿವೈಎಎಸ್‌ಎ ವಿಶ್ವವಿದ್ಯಾಲಯ ಕುಲಪತಿ ಡಾ. ಹೆಚ್. ಆರ್ ನಾಗೇಂದ್ರ, ಸಂಸದ ಕ್ಯಾ. ಬ್ರಿಜೇಶ್ ಚೌಟ, ನವದೆಹಲಿ ಯೋಗ ಹಾಗೂ ಪ್ರಕೃತಿ ವೈದ್ಯ ಸಂಶೋಧನಾ ಕೇಂದ್ರಾಡಳಿತ ಸಂಸ್ಥೆ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್, ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದವೀಧರರ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನವೀನ್ ಕೆ.ವಿ. ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಡಿ. ಹರ್ಷೇಂದ್ರ ಕುಮಾರ್, ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ, ಬಾಬು ಜೋಸೆಫ್ , ಮಂಜುನಾಥ ಎಂ.ಕೆ , ಡಾ. ಪ್ರಶಾಂತ ಶೆಟ್ಟಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ನಿದೇ೯ಶಕ ಡಿ.ಶ್ರೇಯಸ್ ಕುಮಾರ್ ಭಾಗವಹಿಸಿದ್ದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಡಾ.ಸತೀಶ್ಚಂದ್ರ ಎಸ್.ಸ್ವಾಗತಿಸಿದರು. ಡಾ.ಬಿಂದು, ಡಾ.ದೀಪಿಕಾ , ಅನನ್ಯ, ಪ್ರತೀಕ್ಷಾ ಕಾಯ೯ಕ್ರಮ ನಿರೂಪಿಸಿದರು.

Related posts

ನಾವರ ಪೆರಡಾಲು ಗುತ್ತಿನ ಗುಣಪಾಲ ಅಜ್ರಿ ನಿಧನ

Suddi Udaya

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya

ಅಂಡಿಂಜೆ : ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಾಬಂಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘದಿಂದ ಮನೆ ನಿರ್ಮಾಣಕ್ಕೆ ನೆರವು

Suddi Udaya
error: Content is protected !!