ಲಾಯಿಲ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ದೇಶದ ಸುಭಿಕ್ಷೆ ಹಾಗೂ ದೇಶಕೋಸ್ಕರ ಹೋರಾಡುತ್ತಿರುವ ಯೋಧರ ರಕ್ಷಣೆಗಾಗಿ, ದೇಶ ಸೇವೆ ಸಲ್ಲಿಸುತ್ತಿರುವ ಚಂದ್ಕೂರಿನ ಯೋಧ ಯಶೋಧರ ರವರ ತಾಯಿ ಸರೋಜಿನಿ ಮತ್ತು ಚಂದ್ಕೂರಿನ ಭಕ್ತವೃಂದದವರು ಸೇರಿ ಅಮ್ಮನಿಗೆ ದುರ್ಗಾಪೂಜೆಯನ್ನು ಮೇ ೯ರಂದು ರಾತ್ರಿ ನೆರವೇರಿಸಿ ದೇಶದ ಹಾಗೂ ಯೋಧರ ರಕ್ಷಣೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.