24.8 C
ಪುತ್ತೂರು, ಬೆಳ್ತಂಗಡಿ
May 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉದ್ಯೋಗಾವಕಾಶಗಳನ್ನು ಒದಗಿಸುವುದೇ ಗುರಿ – MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಸಂಸ್ಥೆಗಳ ಜಾಗೃತಿ ಅಭಿಯಾನದ ವಾಹನ ತಾಲೂಕಿನಾದ್ಯಂತ ಮನೆ ಬಾಗಿಲಿಗೆ – ಚಾರ್ಮಾಡಿಯಿಂದ ಚಾಲನೆ

ಬೆಳ್ತಂಗಡಿ: ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ (MFSE) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಇದೀಗ ಬೆಳ್ತಂಗಡಿಯಲ್ಲಿ ವೃತ್ತಿಪರ ಮತ್ತು ಪ್ರೊಫೆಶನಲ್ ಕೋರ್ಸ್ ಗಳಲ್ಲಿ ಡಿಪ್ಲೊಮಾ ಪಿಜಿ ಡಿಪ್ಲೋಮಾ ಕೋರ್ಸುಗಳನ್ನು ಕೇಂದ್ರ ಸರ್ಕಾರ ಅಂಗೀಕೃತ NSDC ಪ್ರಮಾಣ ಪತ್ರದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯಿಂದ ವಿವಿಧ ಕೋರ್ಸು ಗಳ ಬಗ್ಗೆ ಬೆಳ್ತಂಗಡಿ ತಾಲೂಕಿನ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ಮತ್ತು ಪ್ರಯೋಜನ ಹಾಗೂ ಉದ್ಯೋಗಾವಕಾಶದ ಪ್ರಯೋಜನಗಳನ್ನು ಪಡೆಯಬಹುದು ಎಂಬಿತ್ಯಾದಿ ವಿಷಯಗಳ ತರಬೇತಿ ವಿಷಯಗಳ ಜಾಹೀರಾತು ವಾಹನಕ್ಕೆ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಭವ್ಯ ಚಾಲನೆಯನ್ನು ಮೇ 12 ರಂದು ಬೆಳ್ತಂಗಡಿಯ ಚಾರ್ಮಾಡಿಯಿಂದ ಆರಂಭಗೊಂಡಿತು.

ಜಾಹೀರಾತು ವಾಹನದ ಉದ್ಘಾಟನೆ ಮತ್ತು ಚಾಲನೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಮಾಜಸೇವಕ ಚಾರ್ಮಾಡಿಯ ಹಸನಬ್ಬ ನೆರವೇರಿಸಿ ಮಾತನಾಡಿ “ಇಂತಹ ತರಬೇತಿ ಸಂಸ್ಥೆಗಳು ಗ್ರಾಮೀಣ ಯುವಕರಿಗೆ ಹೊಸ ದಿಕ್ಕು ತೋರಿಸುತ್ತವೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರೊಫೆಶನಲ್ ಕೋರ್ಸ್ ಗಳು ಅತೀ ಅಗತ್ಯ ಇಂತಹ ಸೇವೆಗಳನ್ನು ನೀಡುವ ಎಂ ಜಿ ತಲ್ಹತ್ ಸವಣಾಲು ಇವರು ಮತ್ತು ಇವರ ತಂಡದ ಸೇವೆ ಶ್ಲಾಘನೀಯ” ಎಂದು ಮೆಚ್ಚುಗೆ ಸೂಚಿಸಿದರು.

ಚಾಲನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜಿ. ತಲ್ಹತ್ ಸವಣಾಲು, ಸಂಸ್ಥೆಯ ಮತ್ತೊಬ್ಬ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮುಹಮ್ಮದ್ ಅಝ್ಮಾನ್ ಕಕ್ಕಿಂಜೆ, ಉದ್ಯಮಿ ಯುರೋಪ್ ಜಾರ್ಜ್ , ಸುಪ್ರೀಮ್ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ ಇದರ ಉನೈಸ್ ಸುಪ್ರೀಮ್ ಹಾಗೂ ಸಾರ್ವಜನಿಕರು, ಊರಿನ ಸರ್ವ ಸಾರ್ವಜನಿಕರು ಉಪಸ್ಥಿತರಿದ್ದರು.

ಜಾಹೀರಾತು ವಾಹನವು ನವೀನ ರೀತಿಯಲ್ಲಿ ವಿನ್ಯಾಸಗೊಳ್ಳಿಸಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳ ವಿವರ, ಸಂಸ್ಥೆಯ ಸಂಪರ್ಕ ಮಾಹಿತಿ ಮತ್ತು ಭವಿಷ್ಯ ನವೀನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಹೊಂದಿದೆ. ಇದೇ ವೇಳೆ ಉದ್ಘಾಟನಾ ಕೊಡುಗೆಯಡಿಯಲ್ಲಿ ಕೆಲವು ಕೋರ್ಸ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಯಿತು.

ಅನುಗ್ರಹ ಟ್ರೈನಿಂಗ್ ಕಾಲೇಜು ಸಾವಿರಾರು ಯುವಕರಿಗೆ ಉಚಿತ ಮತ್ತು ಕಡಿಮೆ ಶುಲ್ಕದಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯಾಗಿದ್ದು, ಇದರ ಸೇವೆಗಳು ರಾಜ್ಯದಾದ್ಯಂತ ಪ್ರಭಾವ ಬೀರುತ್ತಿವೆ.

ಆಸಕ್ತ ವಿದ್ಯಾರ್ಥಿಗಳು ದಾಖಲಾತಿಗೆ ಅನುಗ್ರಹ ಟ್ರೈನಿಂಗ್ ಕಾಲೇಜು, ಶ್ರೀ ರಾಮ ಕಾಂಪ್ಲೆಕ್ಸ್, ಸಂತೆಕಟ್ಟೆ, ಬೆಳ್ತಂಗಡಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ: 8861112182

Related posts

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya

ಮಾಜಿ ಅಧ್ಯಕ್ಷ ಹಾಲಿ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಸತತ ಹೋರಾಟದಿಂದ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಂಜೂರು ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಆರೋಗ್ಯ ಸಚಿವರಿಗೆ ಮತ್ತೊಂದು ಮನವಿ

Suddi Udaya

ಮಡಂತ್ಯಾರು ಗ್ರಾಮ ಪಂಚಾಯತ್ ಆಕರ್ಷಣೀಯ ಸಖೀ ಮತಗಟ್ಟೆ

Suddi Udaya

ಉಜಿರೆ : ಅನುಗ್ರಹ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರ ಭಾರತಿ ಅಭ್ಯರ್ಥಿಗಳ ಆಯ್ಕೆ

Suddi Udaya

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya
error: Content is protected !!