ಪುತ್ತೂರು: ಅಕ್ಷಯ ಕಾಲೇಜಿನ ವೃತ್ತಿಪರ ಕೋರ್ಸ್ ಬಿಕಾಂ ವಿಥ್ ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್‌ನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಂಗ್ಸ್ ಆಫ್ ಫಾರ್ಚ್ಯೂನ್ ಏವಿಯೇಶನ್ ಅಸೋಸಿಯೇಷನ್ ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಇವರ ವತಿಯಿಂದ ಒಂದು ದಿನದ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಏವಿಯೇಷನ್ ಹಾಗೂ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್‌ನ ಕುರಿತಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ತೆರಳಿ ಮಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ತಿಳಿದುಕೊಂಡು ಅಲ್ಲಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-IIಗೆ ಪ್ರಯಾಣಿಸಿ, ಅಲ್ಲಿನ ಏರ್ಪೊಟ್ ಆಪರೇಷನ್ಗಳಾದ ಗ್ರೌಂಡ್ ಸ್ಟಾಫ್ ಸಿಬ್ಬಂದಿಯ ಕಾರ್ಯಗಳು, ಕ್ಯಾಬಿನ್ ಕ್ರೂ ವಿಮಾನ ಸಿಬ್ಬಂದಿಯ ಚಟುವಟಿಕೆಗಳು, ಬಾಗೇಜ್ ಹ್ಯಾಂಡ್ಲರ್, ಸಾಮಾನು ಸಾಗಣೆ ಸಿಬ್ಬಂದಿ ಆಪರೇಷನ್ಗಳು, ಚೆಕ್-ಇನ್ ಏಜೆಂಟ್ ಪ್ರವೇಶ ಸಿಬ್ಬಂದಿಯ ಕರ್ತವ್ಯಗಳು, ಸುರಕ್ಷತಾ ಸಿಬ್ಬಂದಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು ಮತ್ತು ಕಾರ್ಯಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲಾಯಿತು.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಏರ್ಲೈನ್ಸ್ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಏವಿಯೇಷನ್ನ ಕುರಿತಾಗಿ ಹಲವಾರು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅಕ್ಷಯ ಕಾಲೇಜಿನಲ್ಲೇ ಕಲಿತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಳೆ ವಿದ್ಯಾರ್ಥಿ ಮುಸ್ತಾಫಾ ಇವರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊAಡರು. ನಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರದ ಪ್ರಸಿದ್ಧ ಸ್ಟಾರ್ ಪ್ರಾಪರ್ಟೀಸ್‌ಗಳಲ್ಲಿ ಒಂದಾದ ಗ್ರೀನ್ ಪಾರ್ಕ್ ಹೋಟೆಲ್‌ಗೆ ಭೇಟಿ ಕೊಟ್ಟು ಅಲ್ಲಿನ ಜನರಲ್ ಮ್ಯಾನೇಜರ್ ಕು. ಮೇಧಿತ ಅವರಿಂದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಶೈಕ್ಷಣಿಕ ಪ್ರವಾಸದಲ್ಲಿ ದ್ವಿತೀಯ ವರ್ಷದ ಸುಮಾರು 52 ವಿದ್ಯಾರ್ಥಿಗಳು ಭಾಗವಹಿಸಿದರು.