ಅಳದಂಗಡಿ: 800 ವರ್ಷಗಳ ಇತಿಹಾಸವುಳ್ಳ ಭಕ್ತಜನರ ಇಷ್ಟಾರ್ಥ ಸಿದ್ದಿ ಕ್ಷೇತ್ರವೆಂದು ಪ್ರಸಿದ್ಧಿ ಹೊಂದಿರುವ ಅಳದಂಗಡಿ ಸಮೀಪದ ಹಾನಿಂಜ ಸಾಲುಕಾಯೇರು ಶ್ರೀ ಮಹಮ್ಮಾಯಿ ದೇವಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಗೌರವಾಧ್ಯಕ್ಷತೆಯಲ್ಲಿ, ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ, ಅಳದಂಗಡಿ ಅಸ್ರಣ್ಣ ಪ್ರಕಾಶ್ ಹೊಳ್ಳ ನೇತೃತ್ವದಲ್ಲಿ ಮೇ 20 ರಿಂದ 22 ರವರೆಗೆ ಜರುಗಲಿದೆ.
ಕ್ಷೇತ್ರದ ಮಹಮ್ಮಾಯಿ ದೇವರ ಕಾರಣಿಕ ಅಗದವಾಗಿದ್ದು ಅನೇಕ ಪುರಾವೆಗಳಿವೆ. ಕೇತ್ರದಲ್ಲಿ 2019 ತಾಂಬೂಲ ಪ್ರಶ್ನೆ ನಡೆದು ಇದೀಗ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗುತ್ತಿದೆ.
ಹಸಿರುವಾಣಿ ಸಮರ್ಪಣೆ
ಮೇ 20 ರಂದು ಬೆಳಗ್ಗೆ ೯ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ಶ್ರೀ ಮಹಮ್ಮಾಯಿ ದೇವಸ್ಥಾನದವರೆಗೆ ಹಸಿರುವಾಣಿ ಸಮರ್ಪಣೆ ಮೆರವಣಿಗೆ. ಮೇ 21 ರಂದು ಬೆಳಿಗ್ಗೆ ಮಹಮ್ಮಾಯಿ ದೇವಿಯ ಪ್ರತಿಷ್ಠೆ, ರಾತ್ರಿ ಅಧ್ಯಕ್ಷೆರ್ ತುಳು ಹಾಸ್ಯಮಯ ನಾಟಕ, ಮೇ 22 ರಂದು ರಾತ್ರಿ ಕೊಲ್ಲಂದ್ರಡಿ ದೈವದ ನೇಮೋತ್ಸವ, ಮಾರಿಪೂಜೆ ನಡೆಯಲಿದೆ.
ಮೇ 21 ಧಾರ್ಮಿಕ ಸಭಾ ಕಾರ್ಯಕ್ರಮ:
ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಲಾರಬೀಡು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಅಳದಂಗಡಿ ಅರಮನೆ ಶಿವಪ್ರಸಾದ್ ಅಜಿಲ, ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಂಗಳೂರಿನ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಬೆಂಗಳೂರು ಉದ್ಯಮಿ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಗುಜರಾತ್‌ನ ಉದ್ಯಮಿ ಶೇಖರ ದೇವಾಡಿಗ ಪಾಲಬೆ, ಅಳದಂಗಡಿ ದೋರಿಂಜ ಅಮಣಿ ಮಂಜು ನಿವಾಸಿ ಜೈದೀಪ್ ದೇವಾಡಿಗ, ಮುಂಬೈ ಉದ್ಯಮಿ ಸುರೇಶ್ ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ, ಅಳದಂಗಡಿ ವೈದ್ಯ ಡಾ| ಎನ್.ಎಂ. ತುಳಪುಳೆ, ಅಳದಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಹಾಗೂ ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಳದಂಗಡಿ ಐಸಿರಿ ವಿನೋದ್ ದೇವಾಡಿಗ, ಚಂದ್ರಹಾಸ್ ದೇವಾಡಿಗ ಮುಂಬೈ, ಮುರಳೀಧರ ಕಪ್ರಾಜೆ, ಜಗದೀಶ್ ರೈ ಪಾಂಡ್ಯೊಟ್ಟು, ಶ್ರೀನಿವಾಸ್ ದೋರಿಂಜ, ಹಾಗೂ ಸುಕೇಶ್ ಎಸ್ ಪೂಜಾರಿ ಹಾನಿಂಜ ಗೌರವ ಉಪಸ್ಥಿತಿರುವರು ಎಂದು ಸಂಘಟಕರು ತಿಳಿಸಿದ್ದಾರೆ.