ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮೇ 16 ರಂದು ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಂಶೋಧಕ ಡಾ. ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ನಿರ್ದೇಶಕರೂ ಅದ ಡಾ. ಎಸ್.ಡಿ. ಶೆಟ್ಟಿ ಹಾಗೂ ಶ್ರೀಮತಿ ಸುಗುಣ ಶೆಟ್ಟಿ ದಂಪತಿಗಳನ್ನು ಅವರ ಸಾಧನೆ ಮತ್ತು ಮದುವೆಯ 50ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕರು ಡಾ. ಜಯಕೀರ್ತಿ ಜೈನ್ ನೇತೃತ್ವದಲ್ಲಿ ಗೌರವಿಸಲಾಯಿತು..
ಉಪಾಧ್ಯಕ್ಷ ಜಿನರಾಜ ಪೂವಣಿ, ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕ ಪಿ ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ಶ್ರೀಮತಿ ರಕ್ಷಾ, ಪುರೋಹಿತರಾದ ಅರಹಂತ ಇಂದ್ರ, ಜಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.