ಕಳೆಂಜ: ಜೇಸಿಐ ಕೊಕ್ಕಡ ಕಪಿಲಾ ಪ್ರಾಂತ್ಯ E ವಲಯ XV, ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಹಾಗೂ ಸ್ಥಳೀಯ ಕೃಷಿಕರ ಸಹಭಾಗಿತ್ವದಲ್ಲಿ ನೇಜಿ ನಾಟಿ ಸಂಭ್ರಮವು ಮೇ 17 ರಂದು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಶ್ರೀ ಸದಾಶಿವೇಶ್ವರ ದೇವಸ್ಥಾನ ಅಧ್ಯಕ್ಷ ಕೆ. ಜೆಎಫ್ ಎಮ್ ಶ್ರೀಧರ ರಾವ್ ಕಾಯಡ, ಜೆಸಿಐ ಅಧ್ಯಕ್ಷೆ ಡಾ .ಶೋಭಾ ಪಿ , ಜೆಸಿಐ ನಿಕಟಪೂರ್ವಾಧ್ಯಕ್ಷ ಸಂತೋಷ್ ಜೈನ್, ಜೆಸಿಐ ಕಾರ್ಯದರ್ಶಿ ಚಂದನಾ ಪಿ, ಲೇಡಿ ಜೇಸಿ ಅಧ್ಯಕ್ಷೆ ರೇಷ್ಮಾ ಡಿಅಲ್ಮೇಡಾ, ಜೆಜೆಸಿ ಅಧ್ಯಕ್ಷ ಶ್ರವಣ್ , ಜೆಸಿಎಲ್ ಟಿ ಅಧ್ಯಕ್ಷ ದಕ್ಷ ಜೈನ್, ಜೆಸಿ ದೀಪಿಕಾ, ಹೆಚ್.ಜಿ ಎಫ್ ಜೋಸೆಫ್ ಪಿರೇರಾ ಕೊಕ್ಕಡ, ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ರಾವ್ ಕೆ.,ರತ್ನಾವತಿ ಕೊಳಂಬೆ , ವಿಮಲಾ ಪಂಚಮಿ ಪಾದೆ, ಗೌರಿ ಪಂಚಮಿ ಪಾದೆ, ಲೀಲಾವತಿ ಕೊಳಂಬೆ ಹಾಗೂ ಜೆಸಿಐ ಪದಾಧಿಕಾರಿಗಳು, ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.