ಲಾಯಿಲ: ಇಲ್ಲಿಯ ಬಜಕ್ರೆಸಾಲು ಎಂಬಲ್ಲಿ ಸೋಮವತಿ ನದಿಯ ನೀರಿನಲ್ಲಿ ಬಾಳೆ ಎಲೆ, ಹೂ ಸಹಿತ ಪೂಜೆಗೆ ಬಳಸಿದ ವಸ್ತುಗಳು ಮೇ.18 ರಂದು ಕಂಡು ಬಂದಿದೆ.
ಇದರಿಂದ ಸ್ಥಳೀಯರು ಭಯಭೀತಗೊಂಡಿದ್ದರು. ಅದರೆ ಇದು ಸುಳ್ಳು ಸುದ್ದಿಯಾಗಿದ್ದು ವಾಸ್ತವವಾಗಿ ವಾಮಾಚಾರ ಮಾಡಿದ್ದಲ್ಲ ಸ್ಥಳೀಯ ಮನೆಯವರು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೋಷ ಪರಿಹಾರಕ್ಕಾಗಿ ಮಾಡಿದ ಪೂಜೆಯ ವಸ್ತುಗಳನ್ನು ಬಿಸಾಕಲಾಗಿದ್ದು. ಇದನ್ನೇ ತಪ್ಪಾಗಿ ಬಿಂಬಿಸಿ ವಾಮಾಚಾರ ಎಂದು ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ. ಇಲ್ಲಿ ಯಾವುದೇ ವಾಮಾಚಾರ ನಡೆದಿಲ್ಲ ಸಾರ್ವಜನಿಕರು ಸುಳ್ಳು ಸುದ್ದಿಯಿಂದ ಭಯಪಡದೇ ತಪ್ಪು ಅರ್ಥೈಸಿಕೊಳ್ಳಬಾರದು ಎಂದು ಸ್ಥಳೀಯರು ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.
ಇಂತಹ ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಪರಿಶೀಲಿಸದೇ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಬಾರದು, ಇದರಿಂದ ಜನರು ಭಯಭೀತರಾಗಿ ಆತಂಕಕ್ಕೊಳಗಾಗುತ್ತಾರೆ. ಒಂದು ವೇಳೆ ಗಮನಕ್ಕೂ ಬಂದರೂ ಪಂಚಾಯತ್ ಅಥವಾ ಸ್ಥಳೀಯ ಜನಪ್ರತಿನಿಧಿಗಳ, ಪೊಲೀಸರ ಗಮನಕ್ಕೆ ತರುವಂತೆ ವಿನಂತಿಸಿದ್ದಾರೆ.