23.8 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಕ್ತಿ ಯೋಜನೆಯ ಯಶಸ್ವಿಗಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ

ಬೆಳ್ತಂಗಡಿ: ಮುಖ್ಯ ಮಂತ್ರಿ ಸಿದ್ಧರಾಮಯ್ಯ ನವರ ನೇತೃತ್ವದ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಎರಡು ವರ್ಷ ಯಶಸ್ವಿಯಾಗಿ ಪೂರ್ಣಗೊಂಡು ಹಿನ್ನೆಲೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಕೆ.ಎಸ್ ಆರ್.ಟಿ.ಸಿ ಸಿಬ್ಬಂದಿಗಳಿಗೆ ಗೌರವ ಹಾಗೂ ಸಂಭ್ರಮಾಚರಣೆ ಕಾರ್ಯಕ್ರಮವು ಮೇ 21ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ತಾಲ್ಲೂಕಿನಲ್ಲಿ 1.25 ಕೋಟಿ ಮಹಿಳೆಯರು ಶಕ್ತಿ ಯೋಜನೆಯನ್ನು ಉಪಯೋಗಿಸಿದ್ದು, ರಾಜ್ಯ ಸರ್ಕಾರ ರೂ.65 ಕೋಟಿ ರೂಪಾಯಿಗಳನ್ನು ನಮ್ಮ ತಾಲೂಕಿಗೆ ನೀಡಿದೆ. ಯಾವುದೇ ಕಾರಣಕ್ಕೂ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಬದಲಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಹೊಸ ಎಲೆಕ್ಟ್ರಾನಿಕ್ ಬಸ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದು, ಅವಿಭಜಿತ ದ.ಕ. ಜಿಲ್ಲೆಗೆ 400 ಬಸ್ ಗಳನ್ನು ನೀಡಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗಿದೆ ಎಂದರು.

ಕೆ.ಎಸ್ ಆರ್.ಟಿ.ಸಿ ಅಧಿಕಾರಿಗಳು, ಚಾಲಕ, ನಿರ್ವಾಹಕರನ್ನು ಶಾಲು ಹೊದಿಸಿ, ಗುಲಾಬಿ ಹೂವು ನೀಡಿ ಗೌರವಿಸಲಾಯಿತು. ಪ್ರಯಾಣಿಕರಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧಿಕ್ಷಕ ಪ್ರಶಾಂತ್ ಬಳೆಂಜ, KSRTC ಧರ್ಮಸ್ಥಳ ಡಿಪೋ ದ ಪಾರುಪತ್ಯಗಾರ ಅತಾವುಲ್ಲಾ, ಮೇಲ್ವಿಚಾರಕ (ಸಿಬ್ಬಂದಿ) ರೋಶನ್, DTI ರಮೇಶ್, ಬೆಳ್ತಂಗಡಿ ಬಸ್ ನಿಲ್ದಾಣ ಸಂಚಾರ ನಿಯಂತ್ರಕ ಆರ್ ವಸಂತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ವಂದನಾ ಭಂಡಾರಿ, ಕೇಶವ ನಾಯ್ಕ್, ಮೆರಿಟಾ ಪಿಂಟೊ, ವಿಜಯ ಗೌಡ, ನೇಮಿರಾಜ್ ಕಿಲ್ಲೂರು, ಶರೀಫ್ ಸಬರಬೈಲು, ವೀರಪ್ಪ ಮೊಯ್ಲಿ ಹಾಗೂ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಉಪಸ್ಥಿತರಿದ್ದರು.

Related posts

ಕೊರಂ ಕೊರತೆ : ಮೇಲಂತಬೆಟ್ಟು ಗ್ರಾಮ ಸಭೆ ಮುಂದೂಡಿಕೆ

Suddi Udaya

ಶಾಲಾ ಬೇಡಿಕೆಗೆ ರಕ್ಷಿತ್ ಶಿವರಾಂ ಸ್ಪಂದನೆ: ಕಲ್ಲೇರಿ ಶಾಲೆಯಲ್ಲಿ ನೂತನ ಶೌಚಾಯ ನಿರ್ಮಾಣ

Suddi Udaya

ಗೇರುಕಟ್ಟೆಯಲ್ಲಿ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

Suddi Udaya

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಆ.18: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಕೆಸರ್ ಕಂಡೊಡು ಗೌಡರೆ ಗೌಜಿ ಗಮ್ಮತ್ : ಶಾಸಕ ಹರೀಶ್ ಪೂಂಜರಿಗೆ ಆಮಂತ್ರಣ

Suddi Udaya

ಮಿತ್ತಬಾಗಿಲು: ಲೀಲಾವತಿ ನಿಧನ

Suddi Udaya
error: Content is protected !!