
ಗೇರುಕಟ್ಟೆ : ಮೇ.20 ಸಂಜೆ 6ಕ್ಕೆ ವಾಸ್ತು ಪೂಜೆ ಮತ್ತು ರಕ್ಷಾ ಪೂಜೆ ನಡೆಯಿತು.
ಮೇ.21ಸಂಜೆ 5 ಕ್ಕೆ ಮೋಕ್ಷಧಾಮ ಲೋಕಾರ್ಪಣೆ ಹಾಗೂ ಸಂಜೆ
ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ .
ಕಳಿಯ, ನ್ಯಾಯತರ್ಪ್ಪು ಗ್ರಾಮ ವ್ಯಾಪ್ತಿಯನ್ನು ಗುರಿಯಾಗಿಸಿ ಕೊಂಡು ಸರಕಾರದ ಅಧೀನದಲ್ಲಿ ಮಂಜೂರಾದ ಅಂದಾಜು 0.55 ಸೆಂಟ್ಸ್ ಜಾಗದಲ್ಲಿ ಸುಮಾರು 25 ಲಕ್ಷದಲ್ಲಿ ವೆಚ್ಚದಲ್ಲಿ ಹಿಂದೂ ರುದ್ರ ಭೂಮಿಯ ರಚನೆಯ ಕಾರ್ಯಕ್ಕೆ ಕಳೆದ ಮೂರು ವರ್ಷಗಳ ಹಿಂದೆ ಶಾಸಕ ಹರೀಶ್ ಪೂಂಜಾ ಶಿಲನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿದರು.ರುದ್ರಭೂಮಿ ಅನ್ನುವುದು ಕೇವಲ ಸ್ಮಶಾನ ಅಲ್ಲ.ಹೆಣಸುಡುವುದಕ್ಕೆ ಮಾತ್ರ ಸೀಮಿತವಾಗದೆ ಹಿಂದೂ ಧರ್ಮದ ಶ್ರದ್ಧಾ,ಮೋಕ್ಷ ಪುಣ್ಯ ಧಾಮ ಕೇಂದ್ರವಾಗಿ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರ ಅಭಿಪ್ರಾಯವಾಗಿದೆ.ಮಾತ್ರವಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶವ ಸುಡುವ ಸ್ಟೀಮರ್, ಶವಾಗಾರಕ್ಕೆ ನೀಡಿದರು. ಕಳಿಯ ಗ್ರಾಮ ಪಂಚಾಯತ್ ನರೇಗದ ಅನುದಾನ ಕಟ್ಟಡ ರಚನೆ, ಎರಡು ಕೊಠಡಿ ಅಂದಾಜು 4 ಲಕ್ಷ ರೂಪಾಯಿ ಅನುದಾನ ಶಾಸಕರ ನಿಧಿ,ಸ್ಮಶಾನದ ಹೆಬ್ಬಾಗಿಲನ್ನು ಕಳಿಯ ಸಿ.ಎ.ಬ್ಯಾಂಕು ಮತ್ತು ದಾನಿ ಸಹಕಾರದಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು
ಹಿಂದೂ ರುದ್ರಭೂಮಿ ಸೇವಾ ಸಮಿತಿ ಕಳಿಯ,ನ್ಯಾಯತರ್ಪ್ಪು.ಅಧ್ಯಕ್ಷರಾದ ಕೇಶವ ಬಂಗೇರ ಬಿ.ಹೇಳಿದರು.
ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ನೆಲ್ಲಿಕಟ್ಟೆ.ಉಮೇಶ್ ಶೆಟ್ಟಿ, ಸಂಬೋಳ್ಯ, ಉಮೇಶ್ ಕೇಲ್ದಡ್ಕ,ಪ್ರಕಾಶ್ ಮೇರ್ಲ ಕಾರ್ಯದರ್ಶಿ: ಲೋಕೇಶ್ ಕುಮಾರ್ ಎನ್., ಜೊತೆ ಕಾರ್ಯದರ್ಶಿ ಸತೀಶ್ ಭಂಡಾರಿನಾಳ., ರಂಜನ್ ಹೆಚ್. ಕೋಶಾಧಿಕಾರಿ ಶೇಖರ್ ನ್ಯಾಕ, ಗೇರುಕಟ್ಟೆ ಪ್ರಧಾನ ಸಂಚಾಲಕರಾದ ಕರುಣಾಕರ ಶೆಟ್ಟಿ ಕೊರಂಜ.,ಸಂಚಾಲಕರು ವಸಂತ ಶೆಟ್ಟಿ, ಮಾವಿನಕಟ್ಟೆ,ಬಾಲಕೃಷ್ಣ ಗೌಡ, ಬಿರ್ಮೊಟ್ಟುಸಾಮಾಜಿಕ ಜಾಲತಾಣ ಪುರಂದರ ಗೇರುಕಟ್ಟೆ ಉಪಸ್ಥಿತರಿದ್ದರು.
ಮೇ.21ರಂದು ಉದ್ಘಾಟನಾ ಸಮಾರಂಭದಲ್ಲಿ ಹರೀಶ್ ಪೂಂಜ
ಶಾಸಕರು,ದಿವಾಕರ ಎಂ.ಅಧ್ಯಕ್ಷರು, ಗ್ರಾಮ ಪಂಚಾಯತ್ ಕಳಿಯ,
ಕ್ಯಾ। ಬ್ರಿಜೇಶ್ ಚೌಟ ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ., ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ., ಕಿಶೋರ್ ಕುಮಾರ್ ಬೊಟ್ಯಾಡಿ,ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ.,ಕೆ. ಹರೀಶ್ ಕುಮಾರ್ ಮಾಜಿ ಶಾಸಕರು ವಿಧಾನ ಪರಿಷತ್ & ಜಿಲ್ಲಾಧ್ಯಕ್ಷರು ದ.ಕಜಿಲ್ಲಾ ಕಾಂಗ್ರೆಸ್ ಸಮಿತಿ., ರಕ್ಷಿತ್ ಶಿವರಾಮ್ ಅಧ್ಯಕ್ಷರು, ಬೆಸ್ಟ್ ಪೌಂಡೇಶನ್, ಬೆಳ್ತಂಗಡಿ.,ವಸಂತ ಮಜಲುಅಧ್ಯಕ್ಷರು, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ., ಕಿರಣ್ ಚಂದ್ರ ಡಿ. ಪುಷ್ಪಗಿರಿ ಧಾರ್ಮಿಕ ಮುಖಂಡರು, ಬೆಳ್ತಂಗಡಿ.,
ಜಾನ್ ಸುರೇಶ್ ಜೆ.ಎಂ.ಜೆ. ಕನ್‌ಕ್ಷನ್ & ಪೈನಾನ್ಸ್, ಮಂಗಳೂರು.,
ಯಶೋಧರ, ಯೋಜನಾಧಿಕಾರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ.,ಸಂತೋಷ್ ಪಾಟೀಲ್,ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಕಳಿಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಳಿಯ, ನ್ಯಾಯತರ್ಪ್ಪು ಗ್ರಾಮಸ್ಥರು ಉಪಸ್ಥಿತರಿರುವರು ಎಂದು ಹಿಂದೂ ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಬಿ.ಗೇರುಕಟ್ಟೆ ತಿಳಿಸಿದರು.