ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಒಂದು ದಿನದ ಕರಡಿಪಾತ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಧರ್ಮಸ್ಥಳ ದೇವಾಲಯದ ಮಣೆಗಾರರಾಗಿರುವ ವಸಂತ ಭಟ್ ಇವರು ದೀಪ ಪ್ರಜ್ವಲಿಸಿ, ಚಾಲನೆಯನ್ನು ನೀಡಿದರು. ಆ ಬಳಿಕ ಮಾತನಾಡಿದ ಅವರು ಶಾಲೆಯ ಎಲ್ಲಾಮುಂದಿನ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಈ ಕಾರ್ಯದ ಕುರಿತು ಪ್ರಸ್ತಾವಿಕ ನುಡಿಗಳನ್ನು ಆಡಿದರು. ತರಬೇತುದಾರರಾಗಿ ಅನೂಜ್ ದೇವ್ ಲೆಸ್ಲೆ ಹಾಗೂ ನಿಖಿಲ್ ಅವರು ಕರಡಿ ಪಾತ್ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಆಗಮಿಸಿದ್ದರು.
ಶಿಕ್ಷಕರಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು.ಶಾಲಾ ಸಹ ಶಿಕ್ಷಕಿ ಶೀಮತಿ ಪದ್ಮಶ್ರೀ ಪ್ರಾರ್ಥಿಸಿ, ಶ್ರೀಮತಿ ರಮಾ ವಂದಿಸಿ, ಶ್ರೀಮತಿ ಆಶಾ ಕಾರ್ಯಕ್ರಮ ನಡೆಸಿಕೊಟ್ಟರು.