24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರುಮೌಲ್ಯಮಾಪನ: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯ ಅಮೋಘ ಸಾಧನೆ- ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿದ ಪ್ರಾರ್ಥನಾ

ಕಕ್ಯಪದವು : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರಾರ್ಥನಾ ಎಚ್.ಕೆ 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ ಅಮೋಘ ಸಾಧನೆ ಗೈದಿದ್ದಾರೆ. ಬಂಟ್ಯಾಳ ತಾಲ್ಲೂಕಿಗೆ ಪ್ರಥಮ ರ‍್ಯಾಂಕ್ ಗಳಿಸಿದ ಇವರು ಹಾಗೂ ಶಾಲೆಗೆ ಪ್ರಥಮ ಸ್ಥಾನದಿಂದ ತೇರ್ಗೆಡೆ ಹೊಂದಿದ್ದಾರೆ. ಇವರು ಉಳಿ ಗ್ರಾಮದ ಕೇರಿಯಾ ನಿವಾಸಿ ಕಕ್ಯಪದವಿನ ಉದ್ಯಮಿಯಾದ ಹರಿಶ್ಚಂದ್ರ ಮತ್ತು ಕುಶಲ ದಂಪತಿಯ ಪುತ್ರಿ.

ಪ್ರಾರ್ಥನಾ ಈ ಹಿಂದೆ ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ 99 ಅಂಕ ಗಳಿಸಿದ್ದರು. ಆದರೆ ಮರು ಮೌಲ್ಯ ಮಾಪನದಲ್ಲಿ ಎರಡೂ ವಿಷಯದಲ್ಲಿ ಒಂದೊಂದು ಹೆಚ್ಚು ಗಳಿಸಿ ತಲಾ 100 ಅಂಕಗಳೊಂದಿಗೆ ಒಟ್ಟು ಅಂಕಗಳನ್ನು 624ಕ್ಕೆ ಏರಿಸಿ ಈ ಸಾಧನೆ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಎಲ್‌ಸಿಆರ್ ಇಂಡಿಯನ್ ವಿದ್ಯಾಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಸಹಿತ ಇನ್ನಿತರ ಕಾರ್ಯ ಚಟುವಟಿಕೆಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕಿನಲ್ಲಿ ಸಾಧನೆಗೈದು ಹೆಸರುವಾಸಿಯಾಗಿದೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಇಳಂತಿಲ, ತಣ್ಣೀರುಪಂತ, ಮಡಂತ್ಯಾರು, ಉರುವಾಲು, ಬಾರ್ಯ, ಮಚ್ಚಿನ ಗ್ರಾಮಗಳ ಹಾಗೂ ನೆರೆಯ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮದ ವಿದ್ಯಾರ್ಥಿಗಳ ವಿದ್ಯಾಕೇಂದ್ರವಾಗಿದೆ ಎಲ್ ಸಿಆರ್ ಇಂಡಿಯನ್ ವಿದ್ಯಾಸಂಸ್ಥೆ. ದಶಮಾನೋತ್ಸವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದ್ದ ಸಂಸ್ಥೆ ಇದೀಗ ರಾಜ್ಯವೇ ಗುರುತಿಸುವಂತಹ ಸಾಧನೆ ಮಾಡಿದ್ದು ಸಂಸ್ಥೆಯ ಸಾಧನೆಗಳ ಶಿಖರಕ್ಕೆ ಮತ್ತೊಂದು ಮೈಲ್ಲುಗಲ್ಲು ಸೇರ್ಪಡೆಯಾಗಿದೆ.

Related posts

ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ

Suddi Udaya

ಆಪರೇಷನ್ ಸಿಂದೂರ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸ.ಸಂಘದ 21ನೇ ವಾರ್ಷಿಕ ಮಹಾಸಭೆ: ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ : ಹಿಂದೂ ಹಿತ ರಕ್ಷಣಾ ಸಮಿತಿಯ ಕರೆಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಬೆಂಬಲ

Suddi Udaya

ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya
error: Content is protected !!