
ಬೆಳ್ತಂಗಡಿ: ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆ – ಶಾಂತಿನಗರ ಪರಿಸರದಲ್ಲಿ ಮೇ 23 ರಂದು ಮದ್ಯಾಹ್ನ ಭಾರಿ ಬಿರುಗಾಳಿಗೆ ವ್ಯಾಪಕ ಹಾನಿ ಸಂಭವಿಸಿದೆ.

ಕಜೆ ನಿವಾಸಿ ರೋಹಿಣಿ.ಕೋಂ. ರವಿ ನಾಯ್ಕ ರವರ ವಾಸದ ಮನೆಗೆ ರಬ್ಬರ್ ಮರಬಿದ್ದು ಹಾನಿಯಾಗಿದೆ ಹಾಗೂ ಕಜೆ ಅಂಗನವಾಡಿ ಕಟ್ಟಡದ ಛಾವಣಿ ಶೀಟಿಗೆ ಹಾನಿಯಾಗಿದೆ. ಸದ್ರಿಪರಿಸರದ ಅಡಿಕೆ ತೋಟಗಳಿಗೆ, ರಬ್ಬರ್

ತೋಟಗಳಿಗೆ ಅಪಾರ ಹಾನಿಯಾಗಿದೆ. ಸದ್ರಿ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.