24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

AISECT ಯುನಿವರ್ಸಿಟಿ ಕರ್ನಾಟಕ ರಾಜ್ಯ ಸಮ್ಮೇಳನ 2025: ದ.ಕ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜಿನಿಂದ ಶೈಕ್ಷಣಿಕ ಶಕ್ತಿ

ಬೆಳ್ತಂಗಡಿ: AISECT ಗ್ರೂಪ್ ಆಫ್ ಯುನಿವರ್ಸಿಟಿ ವತಿಯಿಂದ ಕರ್ನಾಟಕದ ಸಬಲೀಕರಣಕ್ಕೆ ನಮ್ಮ ಹೆಜ್ಜೆ ಎಂಬ ಕರ್ನಾಟಕ ರಾಜ್ಯ ಸಮ್ಮೇಳನವು ಬೆಂಗಳೂರಿನ ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಬಿಯಲ್ ಹೋಟೆಲ್ ನಲ್ಲಿ ಮೇ.21ರಂದು ವಿಜೃಂಭಣೆಯಿಂದ ನೆರವೇರಿತು.

ಕರ್ನಾಟಕದ ಸುಬಲೀಕರಣದತ್ತ ನಮ್ಮ ಹೆಜ್ಜೆ – Empowering Karnataka” ಎಂಬ ನಾಡಿನ ಸುಧಾರಣೆಯ ಗುರಿಯನ್ನು ಮುಂದಿಟ್ಟುಕೊಂಡು ನಡೆಸಿದ ಸಮ್ಮೇಳನದಲ್ಲಿ ಯುವಕರಿಗೆ ಮೌಲ್ಯಯುತ ಅವಕಾಶಗಳ ಪರಿಚಯವಾಯಿತು. ಶಿಕ್ಷಣದಲ್ಲಿ ವಂಚಿತರಾಗುವವರಿಗೆ, ಪದವಿ, ಉನ್ನತ ಮಟ್ಟದ ಪದವಿ ಶಿಕ್ಷಣ ಹಾಗೂ ಡಿಪ್ಲೊಮಾ ವೋಕೇಶನಲ್ ಶಿಕ್ಷಣವನ್ನು ನೇರವಾಗಿ ಹಾಗೂ ಖಾಸಗಿಯಾಗಿ ಮುಂದುವರಿಸುವುದರೊಂದಿಗೆ ದೇಶದಲ್ಲಿ ಉದ್ಯೋಗವನ್ನು ಗಿಟ್ಟಿಸಲು ಮಾತ್ರವಲ್ಲದೆ ಶೈಕ್ಷಣಿಕವಾಗಿ 10th, PUC, BA, B.Com, MA, M.Com ಹಾಗೂ ಡಿಪ್ಲೊಮಾ ಗಳಂತಹ ವಿದ್ಯಾಭ್ಯಾಸದಲ್ಲಿ ಫೈಲ್ ಆಗಿದ್ದಲ್ಲಿ, ಅಥವಾ ಕಾರಣಾಂತರದಿಂದ ಮುಂದುವರಿಸಲು ಅಸಾಧ್ಯವಾದಂತಹ ವಿದ್ಯಾರ್ಥಿಗಳಿಗೆ ಐಸೆಕ್ಟ್ ಯುನಿವರ್ಸಿಟಿ ವತಿಯಿಂದ ಶೈಕ್ಷಣಿಕವಾಗಿ ಮುಂದುವರಿಯಲು ದೇಶದಲ್ಲಿ ಅವಕಾಶ ಸಿಗಲಿದೆ. AISECT ಯುನಿವರ್ಸಿಟಿಯು UGC, AICTE ಮಾನ್ಯತೆ ಹೊಂದಿದ್ದು ಇದರ ಪ್ರಯೋಜನವನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೊಡುವ ಅಂಗೀಕಾರವನ್ನು ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜು ಪಡೆದಿದೆ.

ಕಾರ್ಯಕ್ರಮದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜುಗಳ ಸಂಸ್ಥಾಪಕ, ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜಿ ತಲ್ಹತ್ ಸವಣಾಲು, ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಖಾದರ್ ನಾವೂರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆ, ವಿಶೇಷವಾಗಿ ಬೆಳ್ತಂಗಡಿ ಮತ್ತು ಮುಡಿಪು ಭಾಗದ ವಿದ್ಯಾರ್ಥಿಗಳಿಗೆ ಹೊಸ ಭವಿಷ್ಯದ ಕನಸುಗಳನ್ನು ನೆರವೇರಿಸಲು ತಮ್ಮ ಪ್ರಾಮಾಣಿಕ ಶೈಕ್ಷಣಿಕ ಸೇವೆಗಳನ್ನು ನೀಡುವ ಉದ್ದೇಶದಿಂದ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅನುಗ್ರಹ ಟ್ರೈನಿಂಗ್ ಕಾಲೇಜು ಇದೀಗ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೋಮಾ ವೃತ್ತಿ ಪರ ಕೋರ್ಸ್‌ಗಳ ಜೊತೆಗೆ SSLC, PUC , BOSSE (Board of Open Schooling Govt. of Sikkim, COBSE ಸದಸ್ಯ) ಮಾನ್ಯತೆ ಪಡೆದ ಈ ಕೋರ್ಸ್‌ಗಳಿಗೆ ಹಾಗೂ ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿರುವವರಿಗೆ ಹೊಸ ಬದುಕಿನ ಶಕ್ತಿ ನೀಡುತ್ತದೆ.

SSLC, PUC ಅಥವಾ ಡಿಗ್ರಿ ಮಾಡುವುದರೊಂದಿಗೆ ಲಭ್ಯವಿರುವ ಡಿಪ್ಲೋಮಾ ಕೋರ್ಸ್‌ಗಳು ಹೀಗಿವೆ: ಏಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ -ಫೈರ್ ಅಂಡ್ ಸೇಫ್ಟಿ, ಏರೋನಾಟಿಕಲ್ ಸೇಫ್ಟಿ, ಮತ್ತು ಮರೈನ್ ಸೇಫ್ಟಿ ಇಂಜಿನಿಯರಿಂಗ್ -ಫ್ಯಾಶನ್ ಡಿಸೈನ್ -ಲಾಜಿಸ್ಟಿಕ್ ಸಪ್ಪೆ ಚೈನ್ ಮ್ಯಾನೇಜೆಂಟ್ -ಟೀಚರ್ ಟ್ರೈನಿಂಗ್ (NTTC) ಈ ಕೋರ್ಸ್‌ಗಳೊಂದಿಗೆ: SSLC, PUC (Arts, Commerce, Science) ಡಿಗ್ರಿ ಕೋರ್ಸ್‌ಗಳು (BA, B.Com, MA, M.Com) , ಕೂಡಾ ಪ್ರಾರಂಭಗೊಂಡಿವೆ, ಅವುಗಳು UGC, AICTE ಮಾನ್ಯತೆ ಹೊಂದಿವೆ.

ಇದರಲ್ಲಿ ವಿಶೇಷವಾಗಿ BOSSE ನಿಂದ ಮಾನ್ಯತೆ ಪಡೆದ ಪಠ್ಯಕ್ರಮಗಳು ಹಾಗೂ CBSE ಮತ್ತು ಇತರೆ ರಾಜ್ಯ ಬೋರ್ಡ್‌ಗಳಿಗೆ ಸಮಾನವಾಗಿರುತ್ತದೆ. ಸರ್ಕಾರಿ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆಯಲಿದ್ದು, ಆನ್‌ಲೈನ್ ಪರೀಕ್ಷೆಗಳ ಸೌಲಭ್ಯ ಹಾಗೂ ಉದ್ಯೋಗದ ತರಬೇತಿ. ನೀಡಲಾಗುತ್ತದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕ ತರಗತಿಗಳ ವ್ಯವಸ್ಥೆ ಮಾಡಲಾಗಿದ್ದು ಪ್ರವೇಶಕ್ಕಾಗಿ ಈ ಕೆಳಗೆ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು:

ಅನುಗ್ರಹ ಟ್ರೈನಿಂಗ್ ಕಾಲೇಜು – ಬೆಳ್ತಂಗಡಿ
ಶ್ರೀರಾಮ ಕಾಂಪ್ಲೆಕ್ಸ್, ಸಂತೆಕಟ್ಟೆ
ಮೊಬೈಲ್: 8861112182

ಅನುಗ್ರಹ ಟ್ರೈನಿಂಗ್ ಕಾಲೇಜು – ಮುಡಿಪು
ಎಸ್ ಕೆ ಟವರ್, ಮೊದಲನೆ ಮಹಡಿ
ಮೊಬೈಲ್: 8431882182

Related posts

ಅ.13-19: ಕನ್ಯಾಡಿ | ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಾಣಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Suddi Udaya

ಸುಲ್ಕೇರಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

Suddi Udaya

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಉಜಿರೆ: ಸೌಜನ್ಯ ಪ್ರಕರಣ: ಆರೋಪಿ ಸಂತೋಷ್ ರಾವ್ ನಿರಪರಾಧಿ ಸಿಬಿಐ ನ್ಯಾಯಾಲಯ ಆದೇಶ

Suddi Udaya

ನಾಳೆ (ಮೇ 22) ವಿದ್ಯುತ್ ನಿಲುಗಡೆ

Suddi Udaya
error: Content is protected !!