September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಮೈಸೂರಿನ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಇ.ಎಫ್.ಎಂ.ಡಿ. ಮಾನ್ಯತೆ ನವೀಕರಣ: ಡಾ| ಡಿ. ಹೆಗ್ಗಡೆಯವರಿಂದ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ಸ್ವೀಕಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಮೈಸೂರಿನಲ್ಲಿ ನಡೆಸಲ್ಪಡುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಡೆವೆಲಪ್‌ಮೆಂಟ್ (ಎಸ್.ಡಿ.ಎಂ.ಐ.ಎಂ.ಡಿ.) ಸಂಸ್ಥೆಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಯುರೋಪಿಯನ್ ಫೆಡರೇಶನ್ ಆಫ್ ಮೆನೇಜ್‌ಮೆಂಟ್ ಡೆವೆಲಪ್‌ಮೆಂಟ್ (ಇ.ಎಫ್.ಎಂ.ಡಿ.) ಸಂಸ್ಥೆಯು ಜಾಗತಿಕ ಮಾನ್ಯತೆ ನೀಡಿ ಗೌರವಿಸಿದೆ.


ಫ್ರಾನ್ಸ್ ದೇಶದ ಲಿಯೋನ್‌ನಲ್ಲಿ ಜೂ.12 ರಂದು ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ. ಐ.ಎಂ.ಡಿ. ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಉಪಸ್ಥಿತರಿದ್ದರು.
ಇ.ಎಫ್.ಎಂ.ಡಿ. ಅಧ್ಯಕ್ಷರಾದ ಎರಿಕ್‌ಕೋರ್ನ್‌ವೆಲ್, ನಿರ್ದೇಶಕರುಗಳಾದ ಆಲ್ಫೋನ್ಸ್ ಸಾಕ್ವೆಟ್ ಮತ್ತು ಬರ್ಬರಾ ಸ್ಪೋರ್ನ್ ಹಾಗೂ ಮಾರ್ಗದರ್ಶಕ ಅಧಿಕಾರಿ ನಿಶಿತ್ ಜೈನ್ ಮಾನ್ಯತೆ ನವೀಕರಣ ಪತ್ರ ನೀಡಿ ಹೆಗ್ಗಡೆಯವರನ್ನು ಗೌರವಿಸಿದರು.
ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಆಡಳಿತ ನಿರ್ವಹಣೆಯ ಉತ್ಕೃಷ್ಟತೆಯನ್ನು ಮನ್ನಿಸಿ ಸಂಸ್ಥೆಗೆ ಎರಡನೆ ಬಾರಿ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ನೀಡಲಾಗಿದೆ.
ಭಾರತದಲ್ಲೆ ಪ್ರಥಮ ಬಾರಿಗೆ2017ರಲ್ಲಿ ಸಂಸ್ಥೆಗೆ ಜಾಗತಿಕ ಮಾನ್ಯತೆ ದೊರಕಿದ್ದು ಬಳಿಕ 2020 ಮತ್ತು ಇದೀಗ ಎರಡನೆ ಬಾರಿ 2023ರಲ್ಲಿ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.
ಇದರಿಂದಾಗಿ ಎಸ್.ಡಿ.ಎಂ.ಐ.ಎಂ.ಡಿ. ಜಗತ್ತಿನ ಹದಿನೇಳು ಪ್ರತಿಷ್ಠಿತ ಮೆನೇಜ್‌ಮೆಂಟ್ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಅಧ್ಯಯನಕ್ಕಾಗಿ ಸಂಪರ್ಕ ಮತ್ತು ಮಾನ್ಯತೆ ಹೊಂದಿದ್ದು ಅವುಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ವಿಶೇಷ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಮುಕ್ತ ಅವಕಾಶವಿದೆ.
ಪ್ರಸ್ತುತ ಎಸ್.ಡಿ.ಎಂ.ಐ.ಎಂ.ಡಿ.ಯ ೩೨ ವಿದ್ಯಾರ್ಥಿಗಳು ಅಮೇರಿಕಾ, ಮಧ್ಯಪೂರ್ವ ಹಾಗೂ ಯುರೋಪಿಯನ್ ದೇಶಗಳ ವಿಶ್ವವಿದ್ಯಾಲಯಗಳಲಲ್ಲಿ ವಿಶೇಷ ಅಧ್ಯಯನ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

Related posts

ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಇಂದಿನಿಂದ ನೀತಿ ಸಂಹಿತೆ ಜಾರಿ: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎ. 26ರಂದು ಮತದಾನ

Suddi Udaya

ಮುಂಡಾಜೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ, ಆಟಿ ತಿನಿಸಿನ ಸಹಭೋಜನ, ಆಟಿಕಳೆಂಜ ಪ್ರದರ್ಶನ

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ನೆರಿಯ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ನೀಲಯ್ಯ ಮಲೆಕುಡಿಯ ನಿಧನ

Suddi Udaya

ಮಚ್ಚಿನ ಗ್ರಾ.ಪಂ., ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸಂಯೋಗದಲ್ಲಿ ಆಧಾರ್ ಶಿಬಿರ

Suddi Udaya

ಬೆಳ್ತಂಗಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಶಾಸಕರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!