ಬೆಳ್ತಂಗಡಿ: ಕಳೆದ ಮಾರ್ಚ್/ಏಪ್ರಿಲ್ 2025 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಶೇ.98.09 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ 105 ವಿದ್ಯಾರ್ಥಿಗಳಲ್ಲಿ 103 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಕು. ಮಾನ್ಯ 620 ಅಂಕದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕು. ಸೌಜನ್ಯ ಎಸ್ ನಾಯಕ್ 615 ಮತ್ತು ಕು. ಆಕರ್ಷ ಕೆ ಪೂಜಾರಿ 615 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.