24.7 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮೋಹನ್ ಕುಮಾರ್ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ “ಯಶೋ-ವಿಜಯ”ಬದುಕು-ನೆನೆಪು-ಸ್ಮರಣೆ ವಿಶೇಷ ಕಾರ್ಯಕ್ರಮ

ಬೆಳ್ತಂಗಡಿ: ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ,ಉದ್ಯಮಿ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಉಜಿರೆ ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಉಜಿರೆ ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್, ಬೆಳ್ತಂಗಡಿ ತಾಲೂಕು ಪತಕರ್ತರ ಸಂಘ, ಬೆಳ್ತಂಗಡಿ ವಲಯ ಗ್ಯಾರೇಜ್ ಮಾಲಕರ ಸಂಘ, ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಇದರ ನೇತೃತ್ವದಲ್ಲಿ ಯಶೋ ವಿಜಯ , ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ ಮೇ ೨೫ ರಂದು ಉಜಿರೆ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ಉಜಿರೆ ಸೋನಿಯ ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷ ಧನಂಜಯ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್,ನಾವೂರು ಆರೋಗ್ಯ ಕ್ಲಿನಿಕ್ ವೈದ್ಯ ಡಾ. ಪ್ರದೀಪ್,ಉಜಿರೆ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಎಣಿಂಜೆ, ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾ.ಸೇ.ಯೋ. ಘಟಕ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್, ಉಜಿರೆ ಎಸ್.ಡಿ.ಎಂ. ಕ್ರೀಡಾ ಸಂಘ ಕಾರ್ಯದರ್ಶಿ ರಮೇಶ್ ಕೆ.,ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳಪುಳೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ೧-೭ನೇ ತರಗತಿ ವರೆಗಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ೬೦೦ ಮಂದಿಗೆ ಬ್ಯಾಗ್ ಹಾಗೂ ಕೊಡೆ ವಿತರಿಸಲಾಯಿತು. ೨೦೨೪-೨೫ನೇ ಸಾಲಿನ ಎಸ್.ಎಸ್‌ಎಲ್.ಸಿ. ಪರೀಕ್ಷೆಯಲ್ಲಿ ೬೦೦ಕ್ಕೂ ಅಧಿಕ ಅಂಕ ಗಳಿಸಿದ ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಕೀರ್ತಿಶೇಷ ವಿಜಯ ರಾಘವ ಪಡ್ವೆಟ್ನಾಯರ ಸ್ಮರಣಾರ್ಥ ಬದುಕು ಕಟ್ಟೋಣ ಬನ್ನಿ ತಂಡದಿಂದ ಕಲ್ಮಂಜ ಗ್ರಾಮದ ಜರ್ಮೆರಪಲ್ಕೆ ಎಂಬಲ್ಲಿ ನಿರ್ಮಿಸಿದ ಮನೆ ‘ವಿಜಯ’ ಇದರ ಕೀ ಹಸ್ತಾಂತರ ಮಾಡಲಾಯಿತು.ದಿ. ವಿಜಯರಾಘವ ಪಡ್ವೆಟ್ನಾಯ ಹಾಗೂ ಡಾ.ಬಿ.ಯಶೋವರ್ಮರ ಬದುಕು ನೆನೆಪುಗಳ ಸ್ಮರಣಿಸುವ ಯಶೋ-ವಿಜಯ ಕಾರ್ಯಕ್ರಮ ಅದ್ಬುತವಾಗಿ ಸಂಪನ್ನಗೊಂಡಿತು.ಬದುಕು ಕಟ್ಟೋಣ ತಂಡ ಸೇವೆಯ ಮಾರ್ಗದಲ್ಲಿ ಬೆಳಕಿನ ನಡಿಗೆ: ಮೋಹನ್ ಕುಮಾರ್ ಸ್ಮರಣೆ ಇಲ್ಲಿ ಕಣ್ಣೀರು ಅಲ್ಲ, ಶಕ್ತಿಯ ಮೂಲವಾಗಿದೆ. ಪಾರ ಹೇಳಿದವರು ಇಲ್ಲದಿದ್ದರೂ, ಅವರ ಮೌಲ್ಯಗಳು ನಮ್ಮೊಳಗೆ ಜೀವಂತವಾಗಿದೆ ಬದುಕು ಕಟ್ಟೋಣ ಬನ್ನಿ ತಂಡ, ನೆನಪನ್ನು ಕೃತ್ಯವಾಗಿ ಪರಿವರ್ತಿಸಿ, ಸೇವೆಯ ಮಾರ್ಗದಲ್ಲಿ ಬೆಳಕಿನ ನಡಿಗೆ ಹಾಕುತ್ತಿದೆ. ನೆನಪಿನಲ್ಲಿ ಸ್ಪಂದಿಸುವ ನಾಯಕತ್ವ, ಇಂದು ಸಮಾಜಮುಖಿ ಕಾರ್ಯಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಮಾತುಗಳಿಗಿಂತ ಮುಂದೆ ಹೋಗಿ, ಕಾರ್ಯವೇ ಕೃತಜ್ಞತೆಯ ರೂಪ ಎನ್ನುವ ದ್ಯೇಯದೊಂದಿಗೆ, ಈ ತಂಡ ಯುವಕರ ಹೃದಯದಲ್ಲಿ ಹೊಸ ಆಶಯ ಬೀಜ ಬಿತ್ತುತ್ತಿದೆ. ಸೇವೆಯ ಸಂಕಲ್ಪ, ನೆನಪಿನ ಸ್ಫೂರ್ತಿ, ಸಮಾಜದ ಹೊಣೆಗಾರಿಕೆ ಈ ಮೂರೂ ಹೆಜ್ಜೆಗಳ ಜೊತೆಯಾಗಿ,ಬನ್ನಿ ಬದುಕು ಕಟ್ಟೋಣ ಎಂದು ಸಂಚಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.

Related posts

ಮೇ.13: ಸುರತ್ಕಲ್ ಎನ್‌ಐಟಿಕೆಯಲ್ಲಿ ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ: ಸ್ಟ್ರಾಂಗ್ ರೂಮ್‌ಗೆ ಕೇಂದ್ರೀಯ ಅರೆಸೇನಾ ಪಡೆಯಿಂದ ಬಿಗು ಭದ್ರತೆ

Suddi Udaya

ನಿಡಿಗಲ್ ನಲ್ಲಿ ಪಿಕಪ್ ವಾಹನ ಟಿಪ್ಪರ್ ಗೆ ಬಡಿದು ಬಳಿಕ ನೇತ್ರಾವತಿ ಸೇತುವೆಯ ತಡೆಗೋಡೆಗೆ ಡಿಕ್ಕಿ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಬೆಳ್ತಂಗಡಿ ಚಚ್೯ಕ್ರಾಸ್ ಬಳಿ ಹೊಸ ರಸ್ತೆಯಲ್ಲಿ ನಿಂತ ಮಳೆ ನೀರು

Suddi Udaya

ಉಜಿರೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರ ವಿರೂಪಗೊಳಿಸಿ ಧಮ೯ದ ಗೌರವಕ್ಕೆ ಧಕ್ಕೆ ಆರೋಪ : ನಾರಾವಿಯ ಶ್ರೀಮತಿ ವಿಜಯ ರವರ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ 552 ನೇ ಸೇವಾ ಯೋಜನೆ ಹಸ್ತಾಂತರ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಆಸರೆಯಾದ ರಾಜ ಕೇಸರಿ

Suddi Udaya
error: Content is protected !!