
ಬೆಳ್ತಂಗಡಿ : ತಣ್ಣೀರುಪಂತ ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿ ಇವರ ವೈವಾಹಿಕ ಜೀವನದ 50ರ ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ’ ದಾಂಪತ್ಯ ಜೀವನದ ಸುವರ್ಣ ಸಂಭ್ರಮ’ ಕಾರ್ಯಕ್ರಮವು ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ಮೇ. 25ರಂದು ಜರುಗಿತು.

ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ರವರಿಂದ ಹಾಸ್ಯ ಸ್ಪಂದನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಯವರು ಆಗಮಿಸಿ ಆಶೀರ್ವಚನ ನೀಡಿದರು. ದುಗ್ಗಪ್ಪ ಗೌಡ ದಂಪತಿಗಳು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ದುಗ್ಗಪ್ಪ ಗೌಡ ದಂಪತಿಗಳ ‘ಸ್ವರ್ಣ ಸಂಭ್ರಮ’ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಬಂಧು ಮಿತ್ರರು, ಗಣ್ಯರು ಹಿತೈಷಿಗಳು ದುಗ್ಗಪ್ಪ ಗೌಡ ದಂಪತಿಗಳಿಗೆ ಶುಭ ಹಾರೈಸಿದರು ದುಗ್ಗಪ್ಪ ಗೌಡ ದಂಪತಿಗಳು ಕಲ್ಲಕಟ್ಟಣಿ ಶಾಲೆಗೆ ಟಿ. ವಿ ನೀಡಿದರು.

ಶ್ರೀಮತಿ ಶೋಭಾ ಮತ್ತು ಶ್ರೀ ಗಿರೀಶ್ ಕುಮಾರ್, ಶ್ರೀಮತಿ ನಯನ ಮತ್ತು ಶ್ರೀ ಬಾಲಕೃಷ್ಣ, ಶ್ರೀಮತಿ ಜಯಶ್ರೀ ಮತ್ತು ಶ್ರೀ ನೂತನ್, ವಿವೇಕ್ ಮತ್ತು ಶ್ರೀಮತಿ ಪುಣ್ಯವಿವೇಕ್, ಪೊಸಂದೋಡಿ ಕುಟುಂಬಸ್ಥರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು. ಪ್ರತಾಪ್ ಸಿಂಹ ನಾಯಕ್, ಸಂಜೀವ ಮಠಂದೂರು, ರಕ್ಷಿತ್ ಶಿವರಾಮ್, ನಾಗೇಶ್ ಗೌಡ, ಕಿರಣ್ ಪುಷ್ಪಗಿರಿ ನಿತ್ಯಾನಂದ ಮುಂಡೋಡಿ, ಸಿ.ಪಿ ಜಯರಾಂ ಮೊದಲಾದವರು ಉಪಸ್ಥಿತರಿದ್ದರು

ಮನಿಷಾ ಮತ್ತು ಚೈತ್ರಾ ಪ್ರಾರ್ಥಿಸಿದರು. ವಾಣಿ ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪನ್ಯಾಸಕ ಬೆಳಿಯಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.ಸುವಣ೯ ಸಂಭ್ರಮದ ಅಂಗವಾಗಿ ಕಾಯ೯ಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ತೆಂಗಿನ ಸಸಿ ವಿತರಿಸಲಾಯಿತು.