37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ ವತಿಯಿಂದ ತಾಲ್ಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಬೆಳ್ತಂಗಡಿ: ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶೋರೂಮ್ ನ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ, ತಾಲೂಕು ಮಟ್ಟದ ಗ್ರಾಮ ಸೀಮಿತ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಮೇ 25 ರಂದು ಬೆಳ್ತಂಗಡಿ ಮುಳಿಯದ ಹಿಂಭಾಗದ ಮೈದಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ವಿಟ್ಲ, ದೈಹಿಕ ಶಿಕ್ಷಕ ರಾಜೇಶ್ ಉಪಸ್ಥಿತರಿದ್ದರು.

ಈ ವೇಳೆ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತನ್ವಿ ಭಟ್, ಶರೋನ್ ಡಿಸೋಜ, ಮನಶ್ರೀ, ಸುಪ್ರಿಯಾ,ಅಂಶಿತಾ ಜೋಸೆಫ್, ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ತುಷಾರ ಬಿ ಎಸ್, ಸಿಂಚನಾ, ಜೋಶನ್ ರಾಫೆಲ್,
ದೀಕ್ಷಾ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮುಳಿಯ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಲೋಹಿತ್ ಕುಮಾರ್ ಸ್ವಾಗತಿಸಿದರು. ದೀಪಕ್ ನೆಲ್ಯಾಡಿ ಕಾರ್ಯಕ್ರಮ‌ ನಿರೂಪಿಸಿದರು. ಸುರೇಶ್ ಪಡಿಪಂಡ ಹಗ್ಗಜಗ್ಗಾಟದ ವೀಕ್ಷಕ ವೇಳೆ ವಿವರಣೆ ಮಾಡಿದರು.
ಮುಳಿಯ ಸಿಬ್ಬಂದಿ ವರ್ಗ ಸಹಕರಿಸಿದರು.

ಹಗ್ಗಜಗ್ಗಾಟ ಫಲಿತಾಂಶ: ಪುರುಷರ ವಿಭಾಗದ ಹಗ್ಗಜಗ್ಗಾಟ
ಪ್ರಥಮ – ಬ್ರಹ್ಮಲಿಂಗೇಶ್ವರ ಮರೋಡಿ
ದ್ವಿತೀಯ – ಮಣಿಕಂಠ ಫ್ರೆಂಡ್ಸ್ ಬೆಳಾಲು
ತೃತೀಯ- ಫ್ರೆಂಡ್ಸ್ ಮಲ್ಲಿಪ್ಪಾಡಿ
ಚತುರ್ಥ- ವೀರ ಕಲ್ಕುಡ ಪದ್ಮುಂಜ

ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಫಲಿತಾಂಶ
ಪ್ರಥಮ- ತೃಪ್ತಿ ಫ್ರೆಂಡ್ಸ್ ಮೊಗ್ರು ಬಂದಾರು
ದ್ವಿತೀಯ- ವನದುರ್ಗಾ ಬರೆಂಗಾಯ
ತೃತೀಯ- ದುರ್ಗಾಂಬ ಇಳಂತಿಲ

Related posts

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮದ್ದಡ್ಕತಾಯಿ ಪಿಲಿ ಚಾಮುಂಡಿ ದೈವದ ವರ್ಷವಾದಿ ನೇವೋತ್ಸವ

Suddi Udaya

ಬೆಳ್ತಂಗಡಿ: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಸೋಮನಾಥ ಭಟ್ ಪಟವರ್ಧನ್ ನಿಧನ

Suddi Udaya

ಉಜಿರೆ:ಎಸ್‌.ಡಿ.ಎಂ ಅಂತರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಸಮಾರೋಪ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ವೇಣೂರು: ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

Suddi Udaya
error: Content is protected !!