ಕಲ್ಮಂಜ: ಇಲ್ಲಿಯ ನಿಡಿಗಲ್ ಸೇತುವೆಯ ಸಮೀಪದ ದಯಲ್ ಬಾಗ್ ಕ್ರಾಸ್ ಬಳಿ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಇಂದು (ಮೇ. 26) ಮುಂಜಾನೆ ನಡೆದಿದೆ.

ಚಾರ್ಮಾಡಿಯಿಂದ ಉಜಿರೆ ಕಡೆಗೆ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.