September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಿಲ್ಯ: ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

ಅಳದಂಗಡಿ: ಇಲ್ಲಿಯ ಪಿಲ್ಯ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಯುತ್ತಿದ್ದಾಗ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ ಎಂ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಪ್ರವೀಣ್ ಬಳಂಜ , ರಮೇಶ್ ಅಲೆಕ್ಕಿ, ಜೋಯೆಲ್ ಕರಂಬಾರು, ರಾಜೇಶ್ ಪೂಜಾರಿ ಸುಲ್ಕೇರಿ ಮೊಗ್ರು, ಅವಿನಾಶ್ ಕುದ್ಯಾಡಿ, ತೇಜಸ್ ಗರ್ಡಾಡಿ, ಸುಂದರ ಮಾಳ, ಮೇಘರಾಜ್ ಗರ್ಡಾಡಿ, ಉಮೇಶ್ ಬಡಗಕಾರಂದೂರು ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ವಿವರ: ಮೇ 24 ರಂದು ವೇಣೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಆನಂದ ಎಂ. ರವರು ಹೊಸಂಗಡಿ ಗ್ರಾಮ ಪಂಚಾಯತ್ ಮರುಚುನಾವಣಾ ಬಂದೋಬಸ್ತು ಕರ್ತವ್ಯದಲ್ಲಿರುವ ಸಮಯ ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಕೂಡಿಕೊಂಡು ಸುಮಾರು 20-25 ಜನ ಗುಂಪು ಸೇರಿ ಅಕ್ರಮವಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ್ದು, ಆರೋಪಿತರು ಪರಾರಿಯಾಗಿದ್ದು, ಆ ಪೈಕಿ 9 ಜನರನ್ನು ವಶಕ್ಕೆ ಪಡೆದು ಅವರಿಂದ ತಕ್ಷೀರಿಗೆ ಉಪಯೋಗಿಸಿದ ಒಟ್ಟು ನಗದು ರೂ. 14,900/- ಹಾಗೂ ಅಂದಾಜು ಮೌಲ್ಯ 2,600/- ರೂ. ಬೆಲೆಬಾಳುವ. 5 ವಿವಿಧ ಬಣ್ಣದ ವಿವಿಧ ಗಾತ್ರದ ಹುಂಜಾ ಕೋಳಿ ಹಾಗೂ ಎರಡು ಬಾಲುಕತ್ತಿಯನ್ನು ಸ್ವಾಧೀನ ಪಡಿಸಿ ಠಾಣಾ ಎನ್.ಸಿ. ನಂಬ್ರ 78/25 ರಂತೆ ನೊಂದಾಯಿಸಿಕೊಂಡಿದ್ದು, ಬೆಳ್ತಂಗಡಿ ಎ.ಸಿ.ಜೆಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ.

Related posts

ಬೆಳ್ತಂಗಡಿ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್ ಲಾಯಿಲ

Suddi Udaya

ಶಿಲ್ಪಾ ಆಚಾರ್ಯ ಮನೆಗೆ ಭೇಟಿ ನೀಡಿದ ಡಿವೈಎಫ್ಐ ನಿಯೋಗ

Suddi Udaya

ನಾಳೆ ವಿದ್ಯುತ್‌ ನಿಲುಗಡೆ

Suddi Udaya

ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟ: ನಾವೂರು ಶಾಲೆ ವಿದ್ಯಾರ್ಥಿ ಜೀವಿತ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ : ಮರ ಸಹಿತ ಗುಡ್ಡ ಕುಸಿತ ತೆರವು

Suddi Udaya

ಬೆಳ್ತಂಗಡಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಮಹಾಸಭೆ

Suddi Udaya
error: Content is protected !!