ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಣ್ಣೀರುಪಂಥ ವಲಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಣ್ಣೀರುಪಂಥ ಇದರ ನೇತೃತ್ವದಲ್ಲಿ ನಡೆಯುತ್ತಿರುವ ಕುಣಿತ ಭಜನಾ ತರಬೇತಿ ಶಿಬಿರಕ್ಕೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಹಾಗೂ ತಾಲೂಕು ಕುಣಿತ ಭಜನಾ ತರಭೇತಿ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಕುಣಿತ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ ಇವರುಗಳು ಭೇಟಿ ನೀಡಿ ತರಬೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಕರಾಯ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ತಣ್ಣೀರುಪಂತ ಇದರ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ಭಜನಾ ಮಂದಿರದ ಹಿರಿಯ ಸದಸ್ಯರು ಹಾಗೂ ತಾಲೂಕಿನ ಭಜಕ ಸಾಧಕ ಪ್ರಶಸ್ತಿ ವಿಜೇತರು ಹಿರಿಯ ಭಜಕ ಗುರುಗಳಾದ ಗೋಪಾಲಕೃಷ್ಣ ಪೈ ಕರಾಯ, ಮಹಾಬಲ ಶೆಟ್ಟಿ ಮೈರ , ಶ್ರೀ ಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ರಾಜಶೇಖರ ಪೇರೋಡಿ, ಸೇವಾಪ್ರತಿನಿಧಿ ಶ್ರೀಮತಿ ಸುಜಾತ ಕರಾಯ , ರಾಮಚಂದ್ರ ಗೌಡ ಉಪಸ್ಥಿತರಿದ್ದರು.