ಬೆಳ್ತಂಗಡಿ: ಚಾರ್ಮಾಡಿ ಪ್ರದೇಶದಲ್ಲಿರುವ ಅಪಾಯಕಾರಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸಿದ್ದು ಇದರಿಂದ ಪ್ರವಾಸಿಗರ ಮೋಜು ಮಸ್ತಿಗೆ ತಡೆ ಹಿಡಿಯಲಾಗಿದೆ.
ಇತ್ತೀಚಿಗೆ ಸುರಿದ ಮಳೆಯಿಂದ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರು ಇದರ ಸೊಬಗನ್ನು ಆನಂದಿಸಲು ತಮ್ಮ ಜೀವದ ಹಂಗು ತೊರೆದು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಪಿ ತೆಗೆದುಕೊಳ್ಳುವುದು ಕಂಡುಬಂದಿದೆ, ಇದರಿಂದ ಎಚ್ಚೆತ್ತ ಪೊಲೀಸರು ಚಾರ್ಮಾಡಿಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಜಲಪಾತಗಳ ಬಳಿ ಬ್ಯಾರಿಕೇಡ್ ಇಟ್ಟು ಬಂಡೆಗಳನ್ನು ಹತ್ತದಂತೆ ತಡೆ ಹಿಡಿದಿದ್ದಾರೆ, ಅಲ್ಲದೆ ಬಂಡೆ ಹತ್ತಿದ್ದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಬಣಕಲ್ ಪೊಲೀಸರು ನೀಡಿದ್ದಾರೆ.