37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯ ನೂತನ “ಕೆ.ವಿ.ಪಿ.” ಕಾಂಪ್ಲೆಕ್ಸ್ ಶುಭಾರಂಭ

ಗುರುವಾಯನಕೆರೆ: ಕಳೆದ 12 ವರ್ಷಗಳಿಂದ ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ ಸಂಸ್ಥೆಯಾಗಿ ಬೆಳೆದಿದೆ. ಇದೀಗ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕೆ.ವಿ.ಪಿ. ಕಾಂಪ್ಲೆಕ್ಸ್ (ಕುದ್ಕೋಳಿ ವಾಸು ಪೂಜಾರಿ ಕಾಂಪ್ಲೆಕ್ಸ್) ಇದರ ಶುಭಾರಂಭವು ಮೇ 30ರಂದು ಜರಗಿತು.

ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭಾ ಹಾರೈಸಿದರು. ವಾಣಿಜ್ಯ ಮಳಿಗೆಯ ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಭಯ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ , ಕುದ್ಕೋಳಿ ವಾಸು ಪೂಜಾರಿ ಉಪಸ್ಥಿತರಿದ್ದರು.

ಕೆ.ವಿ.ಪಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಿಸಲಿರುವ ಗುರುದೇವ ಎಲೆಕ್ಟ್ರಿಕಲ್ ನಲ್ಲಿ ಸ್ಯಾನಿಟರಿಗಳು, ಸಿಪಿ ಫಿಟ್ಟಿಂಗ್, ಗ್ಲೆ ಫಿಟ್ಟಿಂಗ್, ಆಶೀರ್ವಾದ್ ಸಿಪಿವಿಸಿ, ಯುಪಿವಿಸಿ, ಪಿವಿಸಿ ಪೈಪ್‌ಗಳು, ಆಶೀರ್ವಾದ್ ಕಾಲಮ್ ಪೈಪ್‌ಗಳು, ಎಚ್‌ಡಿಪಿಇ ಪೈಪ್‌ಗಳು, ಟ್ಯಾಂಕ್‌ಗಳು ಮತ್ತು ಎಲ್ಲಾ ರೀತಿಯ ವಿದ್ಯುತ್ ಸರಕುಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ತಾರಾ ಮತ್ತು ವಾಸು ಪೂಜಾರಿ ಕುದ್ಕೋಳಿ ಹಾಗೂ ನಿತೇಶ್ ಅವರು ತಿಳಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಿಬರಾಜೆ ಅಂಗನವಾಡಿ ಕೇಂದ್ರದ ಆವರಣ ಗೋಡೆ ರಚನೆಗೆ ರೂ.30 ಸಾವಿರ ಅನುದಾನ

Suddi Udaya

ಬೆಳ್ತಂಗಡಿ :ಬಿ.ಎನ್ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ

Suddi Udaya

ಬೆನಕ ಆಸ್ಪತ್ರೆಯಲ್ಲಿ ‘ಡಿ ‘ಲೆವೆಲ್‌ ಐಸಿಯು ಸೌಲಭ್ಯ ಮತ್ತು ಸಂಪೂರ್ಣ ಶೈತ್ಯಾಗಾರವಿರುವ ಆಂಬುಲೆನ್ಸ್‌ ಲೋಕಾರ್ಪಣೆ

Suddi Udaya

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

Suddi Udaya

ಡಿ.13: ಕಕ್ಕಿಂಜೆಯಲ್ಲಿ ಮರ್ಹೂಂ ಅಝ್ಲೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya
error: Content is protected !!