March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಮೊಗ್ರು: ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ

ಮೊಗ್ರು: ಅಲೆಕ್ಕಿ-ಮುಗೇರಡ್ಕ-ಮೊಗ್ರು ಜೈ ಶ್ರೀ ರಾಮ್ ಸೇವಾ ಟ್ರಸ್ಟ್ ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ, ಮಕ್ಕಳ ಹೊರಾಂಗಣ ಆಟಿಕೆ ಮೈದಾನ, ರಾಷ್ಟ್ರಧ್ವಜ ಸ್ತಂಭ, ಭಗವಧ್ವಜ ಕಂಬ, ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಉದ್ಘಾಟನೆ ಹಾಗೂ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು.

ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನೆ ಮಾಡಿ ಧ್ವಜ ಕಂಬ ಉದ್ಘಾಟಿಸಿ ಶುಭಹಾರೈಸಿದರು. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಮಕ್ಕಳ ಹೊರಾಂಗಣ ಆಟಿಕೆ ಉದ್ಘಾಟಿಸಿದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಲೋಕಾರ್ಪಣೆಗೊಳಿಸಿದರು.

ಉದಯ ಭಟ್ ಕೊಳಬ್ಬೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪದ್ಮುಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವೆಂಕಟರಮಣ ಭಟ್, ಪುತ್ತೂರು ಕಬಕ ಪುರೋಹಿತ ದೇವರಾತ ಭಟ್, ಪ್ರಗತಿಪರ ಕೃಷಿಕರಾದ ಚಂದ್ರಹಾಸ ಗೌಡ ದೇವಸ್ಯಗುತ್ತು, ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಗಂಗಾಧರ ಪೂಜಾರಿ, ಬಂದಾರು ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕ ವೃಂದ, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಮಾತೃ ಮಂಡಳಿ, ಮಾತಾಜಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಭರತೇಶ್ ಪುಣ್ಕೆದಡಿ ಸ್ವಾಗತಿಸಿ, ಮಾತಾಜಿ ಪುಷ್ಪಲತಾ ನಿರೂಪಿಸಿ, ಉದಯ ಭಟ್ ಕೊಳಬ್ಬೆ ಧನ್ಯವಾದವಿತ್ತರು.

Related posts

ಪೈ ಅಕಾಡೆಮಿಯ ನೂತನ ಶಾಖೆ ಕಕ್ಕಿಂಜೆಯಲ್ಲಿ ಶುಭಾರಂಭ

Suddi Udaya

ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

Suddi Udaya

ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ – ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತು ಸಾಹಿತ್ಯ ಬರವಣಿಗೆಯ ಕಾರ್ಯಾಗಾರ

Suddi Udaya

ಅಳದಂಗಡಿಯಲ್ಲಿ ಭಕ್ತಿ ಭಾವದಿಂದ ಮೊಳಗಿದ ಹನುಮೋತ್ಸವ, ಸಾವಿರಾರು ಭಕ್ತರು ಭಾಗಿ ಕುಣಿತ ಭಜನೆ, ಹನುಮ ಯಾಗ, ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಶಿವಾಜಿ‌ ನಾಟಕ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ವಾಣಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

Suddi Udaya
error: Content is protected !!