September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯಿಂದ ಬೆಳಾಲು ಕೊಯ್ಯೂರು ಕೆಎಸ್ಆರ್ ಟಿ. ಸಿ ಬಸ್ ಸಂಚಾರ ಉದ್ಘಾಟನೆ

ಉಜಿರೆ: ಉಜಿರೆ-ಬೆಳಾಲು-ಪೆರ್ಲ ಬೈಪಾಡಿ ಮೂಲಕ ಕೊಯ್ಯೂರು ಆದೂರ್ ಪೆರಾಲ್‌ಗೆ ಸಂಚಾರಿಸುವ ಕೆಎಸ್‌ಆರ್‌ಟಿಸಿ ಬಸ್‌ನ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.

ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಾಮಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಬಸ್ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಸ್ ಚಾಲಕ ಲೋಕೇಶ್ ಮತ್ತು ನಿರ್ವಾಹಕ ಕುಮಾರ್ ರವರನ್ನು ಅಭಿನಂದಿಸಲಾಯಿತು.
ಉಜಿರೆ, ಬೆಳಾಲು, ಪೆರ್ಲ ಬೈಪಾಡಿ, ಬಂದಾರು ಕಡೆಯಿಂದ ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮತ್ತು ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಗಳಿಗೆ ಈ ಬಸ್ ರೂಟ್ ಪ್ರಯೋಜನಕಾರಿಯಾಗಲಿದೆ. ಸಾರ್ವಜನಿಕರು ಕೂಡಾ ಈ ಬಸ್ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿನಯ್ ಕುಮಾರ್, ಕಾಲೇಜು ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಸ್ವಾಗತಿಸಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಿವಾ ಕೊಕ್ಕಡ ವಂದಿಸಿದರು.
ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಡಿಪ್ಪೋ ಮ್ಯಾನೇಜರ್ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

Related posts

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮ

Suddi Udaya

ಕ್ರೀಡಾಕೂಟ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ವಾಣಿ ಆಂ.ಮಾ. ಶಾಲಾ ಬಾಲಕ-ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮಚ್ಚಿನ: ಸಂವಿಧಾನ ಜಾಗೃತಿ ಜಾಥ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ ಆಚರಣೆ

Suddi Udaya

ಚಾಮಾ೯ಡಿ ಘಾಟಿಯಲ್ಲಿ ಧಮ೯ಸ್ಥಳದ ದಿಲೀಫ್ ರವರ ಶವ ಪತ್ತೆ ಪ್ರಕರಣ : ಅಪಘಾತ ಎಸಗಿದ ತರಕಾರಿ ಸಾಗಾಟದ ಪಿಕಫ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

Suddi Udaya
error: Content is protected !!