25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜು

ಅಳದಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ

ಅಳದಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಪ್ರತೀ ವರ್ಷ ಉಚಿತವಾಗಿ ನೀಡುವ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ ಜೂ.1ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ವಹಿಸಿದ್ದರು.

ವೇದಿಕೆಯಲ್ಲಿ ಪೌರ ಸನ್ಮಾನ ಸಮಿತಿಯ ಅಧ್ಯಕ್ಷ ಎಂ. ಗಂಗಾಧರ ಮಿತ್ತಮಾರು, ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದು ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿ ಹಿರಿಯರಾದ ಸೋಮನಾಥ ಮಯ್ಯ, ಭರತೇಶ್ ವಿ, ಡಾ. ಎನ್.ಎಂ. ತುಳುಪುಳೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ರಾಜಶೇಖರ ಶೆಟ್ಟಿ, ನ್ಯಾಯವಾದಿ ಅಜಿತ್ ಕುಮಾರ್ ನಾವರ, ಸದಾನಂದ ಪೂಜಾರಿ ಉಂಗಿಲಬೈಲ್, ಸುಪ್ರೀತ್ ಜೈನ್, ರತ್ನರಾಜ ಜೈನ್ ಪಿಲ್ಯ, ಮೋಹನ್ ಎ. ದಾಸ್ ಅಳದಂಗಡಿ, ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸಂತೋಷ್ ಹೆಗ್ಡೆ ಕಟ್ಟೆ, ಶಿಕ್ಷಕರಾದ ನಾಗಭೂಷಣ್, ಶಿಕ್ಷಕಿ ಮಂಗಳ, ಬಡಗಕಾರಂದೂರು ಶಾಲೆ ಮುಖ್ಯೋಪಾಧ್ಯಾಯರಾದ ಸುರೇಶ್, ಹರಿಣಾಕ್ಷಿ ಕೆ. ಶೆಟ್ಟಿ, ಶ್ರೀರಂಗ ಮಯ್ಯ, ಜಗನ್ನಾಥ ಶೆಟ್ಟಿ, ಗಣೇಶ್ ದೇವಾಡಿಗ, ಧರ್ಣಪ್ಪ ದೋರಿಂಜೆ, ಯಶೋಧರ ಬಿಕ್ಕಿರ, ಸದಾನಂದ ಬಿ.ಕುದ್ಯಾಡಿ, ಕೊರಗಪ್ಪ ಕುಡ್ದಲಬೆಟ್ಟು, ಜಗದೀಶ್ ರೈ, ಹರೀಶ್ ಕುಲಾಲ್ ಕೆದ್ದು, ಸಂತೋಷ್ ಕಟ್ಟೆ, ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಸಮಾರಂಭ ಜೂನ್14 ರಂದು ಶನಿವಾರ ನಡೆಯುವುದಾಗಿ ಪ್ರಕಟಪಡಿಸಲಾಯಿತು.

ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪಿ.ಹೆಚ್.ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು.ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಧನ್ಯವಾದ ಸಲ್ಲಿಸಿದರು.

Related posts

ಕೌಕ್ರಾಡಿ: ಮಣ್ಣಗುಂಡಿಯಲ್ಲಿ ಗುಡ್ಡ ಕುಸಿತ: ಹೆದ್ದಾರಿ ವಾಹನ ಸಂಚಾರ ಸ್ಥಗಿತ

Suddi Udaya

ಅ.16: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ‘ಅಟ್ಟಳಿಗೆಯ ಸ್ತಂಭ ನ್ಯಾಸ’ ಕಾರ್ಯಕ್ರಮ

Suddi Udaya

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ಶಿಶಿಲ: ಪಡ್ಪು ನಿವಾಸಿ ಧರ್ಣಪ್ಪ ಗೌಡ ನಿಧನ

Suddi Udaya

‘ಪ್ರೇರಣಾ – 2026’ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಉತ್ಸವ : ಉಜಿರೆಯ ಎಸ್.ಡಿ.ಎಂ ಕಾಲೇಜು ಚಾಂಪಿಯನ್ಸ್

Suddi Udaya

ಕಾಂಗ್ರೆಸ್ ಭ್ರಷ್ಟಾಚಾರದ ಆಡಳಿತವನ್ನೇ ನೀಡುವುದು ಎಂಬುದು ಗಟ್ಟಿಯಾಗುತ್ತಿದೆ ಇದಕ್ಕೆ ಇತ್ತೀಚಿನ ಕೃಷಿ ಸಚಿವರ ನಡೆಯೇ ಸಾಕ್ಷಿಯಾಗಿದೆ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!