September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಮಸ್ಯೆ

ನೈನಾಡು ಅಂಗನವಾಡಿ ಕೇಂದ್ರಕ್ಕೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದು ಹಾನಿ

ಬೆಳ್ತಂಗಡಿ: ಪಿಲಾತಬೆಟ್ಟು ಗ್ರಾಮದ ನೈನಾಡು ಅಂಗನವಾಡಿಗೆ ಹಿಂಭಾಗದ ಸಂತ ಜೋಸೆಫರ ಅನುದಾನಿತ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಅಂಗನವಾಡಿಯ ಒಂದು ಪಾರ್ಶ್ವದ ಗೋಡೆಗೆ ಭಾಗಶಃ ಹಾನಿಯಾಗಿದೆ.

ಅಂಗನವಾಡಿಯ ಗೋಡೆಯಲ್ಲಿ ಬಿರುಕು ಉಂಟಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಅಂಗನವಾಡಿಯನ್ನು ಸದ್ಯದ ಮಟ್ಟಿಗೆ ಹತ್ತಿರದ ಶ್ರೀರಾಮ ಭಜನಾ ಮಂದಿರದ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ.

ಅಂಗನವಾಡಿಯ ದಾಖಲೆ ಪುಸ್ತಕಗಳನ್ನು, ಕಪಾಟು, ಅಡುಗೆ ಸರಂಜಾಮುಗಳನ್ನು ಶ್ರೀರಾಮ ಯುವಕ ಸಂಘ ಹಾಗೂ ಭಜನಾ ಮಂದಿರದ ಸದಸ್ಯರ ಸಹಕಾರದಿಂದ ಭಜನಾ ಮಂದಿರದ ಸಭಾ ಭವನಕ್ಕೆ ಸಾಗಿಸಲಾಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ರತ್ನಾಕರ್, ಸದಸ್ಯ ಲಕ್ಷ್ಮೀನಾರಾಯಣ ಹೆಗ್ಡೆ ನಿನ್ಯಾಲು ಹಾಗೂ ಅಂಗನವಾಡಿ ಶಿಕ್ಷಕಿಯವರ ಕೋರಿಕೆಗೆ ಶ್ರೀ ರಾಮ ಭಜನಾ ಮಂದಿರದವರು ತಕ್ಷಣ ಸ್ಪಂದನೆ ನೀಡಿದ್ದಾರೆ.

ನೈನಾಡು ಪರಿಸರದಲ್ಲಿ ಬಹಳಷ್ಟು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದ್ದು ಸದರಿ ಅಂಗನವಾಡಿಗೆ ನೂತನ ಕಟ್ಟಡವು ಮಂಜೂರಾಗಿದ್ದು ಹತ್ತಿರದ ಶ್ರೀರಾಮ ಯುವಕ ಸಂಘಕ್ಕೆಂದು ಕಾದಿರಿಸಲಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ನೂತನ ಕಟ್ಟಡವು ಭಾಗಶಃ ಪೂರ್ಣಗೊಂಡಿದ್ದು, ನೆಲಹಾಸು, ಕಿಟಕಿ ಬಾಗಿಲು, ವಿದ್ಯುತ್ ಸಂಪರ್ಕಗಳು ಇನ್ನಷ್ಟೇ ಆಗಬೇಕಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ತ್ವರಿತವಾಗಿ ಸಾಗುವಂತೆ ಮಾಡಬೇಕೆಂದು ಊರವರ ಒಕ್ಕೊರಲಿನ ಮನವಿ. ಈ ಬಗ್ಗೆ ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಗುತ್ತಿಗೆದಾರರಲ್ಲಿ ಮಾತುಕತೆ ನಡೆದಿದ್ದು ಅನುದಾನದ ಕೊರತೆಯಿದೆ ಎಂಬುದಾಗಿ ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ತುರ್ತಾಗಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕಾಗಿದೆ.

Related posts

ಬೆಳ್ತಂಗಡಿ ಟಿವಿಎಸ್ ಲೋಬೊ ಮೋಟರ್ಸ್ನಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಬುಕ್ಕಿಂಗ್ ಹಾಗೂ ಸರ್ವಿಸ್ ಸೇವೆ ಲಭ್ಯ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ: ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!