37.9 C
ಪುತ್ತೂರು, ಬೆಳ್ತಂಗಡಿ
March 6, 2026
ಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮೂಡಬಿದಿರೆ: ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ಮೂಡಬಿದಿರೆ: ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಜೂ.೪ರಂದು ನಡೆಯಿತು.

ಟ್ರಸ್ಟಿ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎನ್. ವೆಂಕಟೇಶ್ ನಾಯಕ್ ಸ್ವಾಗತಿಸಿ “ಹಿಂದಿನ ಕಾಲದ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಕುರಿತು ಸರಿಯಾದ ಮಾರ್ಗದರ್ಶನ ಮಾಡುವವರಿರಲಿಲ್ಲ ಆದರೆ ಇಂದು ನಿಮಗೆ ಉತ್ತಮ ಅವಕಾಶಗಳಿವೆ. ನಿಮ್ಮ ಗುರಿಯನ್ನು ತಲುಪುವವರೆಗೂ ಪ್ರಯತ್ನಿಸಿ” ಎಂದರು.

ಸಂಸ್ಥೆಯ ಟ್ರಸ್ಟಿ ಚಂದ್ರಶೇಖರ ರಾಜೇಅರಸ್ ಮಾತನಾಡಿ ಪೋಷಕರ ಕನಸನ್ನು ನನಸಾಗಿಸುವುದೇ ನಮ್ಮ ಗುರಿಯಾಗ ಬೇಕು ಇದೆಲ್ಲದರ ಯಶಸ್ಸಿಗೆ ನಮ್ಮ ಯೋಜನೆಯು ಸರಿಯಾಗಿರಬೇಕು ಮತ್ತು ಯಶಸ್ಸಿಗೆ ಶ್ರಮ ಅತೀ ಮುಖ್ಯ ಜೊತೆಗೆ ಯಾವ ರೀತಿಯ ಯೋಜನೆಗಳನ್ನು ಮಾಡಬೇಕು ಯಾವ ರೀತಿಯಲ್ಲಿ ಪರೀಕ್ಷೆಯನ್ನ ಎದುರಿಸಬೇಕು ಎಂದು ವಿವರಿಸಿದರು.

ಟ್ರಸ್ಟಿ ಸುಭಾಷ್ ಝಾ ಮಾತನಾಡಿ ನಿಮ್ಮ ಪದವಿಪೂರ್ವ ಶಿಕ್ಷಣವನ್ನು ಯುದ್ಧದ ರೀತಿಯಲ್ಲಿ ಎದುರಿಸಬೇಕು ಮತ್ತು ನಿಮ್ಮ ಪ್ರಯಾಣ ದಲ್ಲಿ ಬರುವ ಎಲ್ಲಾ ಸವಾಲು ಗಳನ್ನು ವೀರರಂತೆ ಎದುರಿಸಿ ಎಂದರು. ಜೊತೆಗೆ ನಿಮ್ಮ ಅರೋಗ್ಯದ ಬಗ್ಗೆ ಗಮನ ಹರಿಸಿ ಹಾಗೂ ಎರಡು ವರ್ಷಗಳ ಕಾಲ ನೀವು ಇಷ್ಟ ಪಟ್ಟು ಓದಿದಲ್ಲಿ, ಶಿಸ್ತು ಪಾಲಿಸಿದಲ್ಲಿ ಯಶಸ್ಸು ಖಂಡಿತ ಎಂದರು.

ಟ್ರಸ್ಟಿ ಶರತ್ ಗೋರೆ ಮಾತನಾಡಿ ಜೆಇಇ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಮಹತ್ವವನ್ನು ತಿಳಿಹೇಳಿದರು ಹಾಗೂ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಟ್ರಸ್ಟಿ ಯೋಗೇಶ್ ಬೆಡೇಕರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಅರೋಗ್ಯವನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಸುಚಿತ್ವ, ಶಿಸ್ತು, ಪಾಲಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿ ಮೆಹಬೂಬ್ ಭಾಷಾ ಮಾತನಾಡಿ ನಮ್ಮ ಸಂಸ್ಥೆಯು ನಿಮ್ಮ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಕಲ್ಪಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಅರುಣ್ ಡಿ’ಸಿಲ್ವ ಉಪಸ್ಥಿತರಿದ್ದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕ ಅರುಣ್ ಕುಮಾರ್ ವಂದಿಸಿದರು.

Related posts

ಬೆಳ್ತಂಗಡಿ : ಮಕ್ಕಳ ಹಕ್ಕುಗಳ ಮಾಸೋತ್ಸವ ಉದ್ಘಾಟನೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ನಿಡ್ಲೆ ಸರಕಾರಿ ಪ್ರೌಢಶಾಲೆಗೆ ಶೇ. 95.65 ಫಲಿತಾಂಶ

Suddi Udaya

ಉರುವಾಲು : ಮುಹಮ್ಮದ್ ರಾಝಿಖ್ ದುಬೈನಲ್ಲಿ ಅನುಮಾನಸ್ಪದವಾಗಿ ಸಾವು

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2023-24ನೆಯ ಸಾಲಿನಲ್ಲಿ ದಾಖಲೆಯ ನೇರ ನೇಮಕಾತಿಯ ಮೂಲಕ ಉದ್ಯೋಗಾವಕಾಶ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ.14.25 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya
error: Content is protected !!