26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮನೋಜ್ ಕಟ್ಟೆಮಾರ್‌ರವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಮನೋಜ್ ಕಟ್ಟೆಮಾರ್ ಧರ್ಮದರ್ಶಿಗಳು ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ಇವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಅದೆಷ್ಟೋ ಬಾರಿ ಸರಕಾರಿ ಆಸ್ಪತ್ರೆಯ ಸ್ವಚ್ಛಾಲಯ ಕಾರ್ಯಕ್ರಮ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮಗಳು ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ತಾಲೂಕು ಆಸ್ಪತ್ರೆಯ ಕಾರ್ಯಕ್ರಮ ನಿರೂಪಕರಾದ ಅಜಯ್ ಸಂತಸ ವ್ಯಕ್ತಪಡಿಸಿದರು. ಬೆಳ್ತಂಗಡಿಯ ಅನುಗ್ರಹ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ನೆರವೇರಿಸಿದರು. ಆಶ್ರಮದ ನಿವಾಸಿಗಳು ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಡಾ| ಚಂದ್ರಕಾಂತ್, ಡಾ| ಗಿರೀಶ್ ಡೊಂಗ್ರೆ, ಮನೋಜ್ ಕಟ್ಟೆಮಾರು ಧರ್ಮದರ್ಶಿಗಳು ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು, ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಸಂಘಟನೆಯ ಗೌರವ ಸಲಹೆಗಾರರಾದ ಪ್ರೇಮ್‌ರಾಜ್, ರೋಷನ್, ಸಾಮಾಜಿಕ ಜಾಲತಾಣ ಸಂಪತ್, ಸಂಚಾಲಕರು ಜಗದೀಶ್, ಮಹಿಳಾ ಘಟಕದ ಸೌಮ್ಯ ಉಪಸ್ಥಿತರಿದ್ದರು

Related posts

ಉರುವಾಲು: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರಿಂಜ ಶ್ರೀ ವನಶಾಸ್ತರ ದೇವಸ್ಥಾನಕ್ಕೆ ಮೆಸ್ಕಾಂ ಇಲಾಖೆಯ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಇಂದು (ಜು.17) ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನೇತಾಜಿನಗರ ಇವರ ವತಿಯಿಂದ ತಾಳ ಮದ್ದಳೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಟೀಕಿಸಲು ನೈತಿಕತೆಯಿಲ್ಲ : ಸಂದೀಪ್ ಎಸ್ ನೀರಲ್ಕೆ ಅರ್ವ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya
error: Content is protected !!