September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಯೋಗದಲ್ಲಿ “ಗಣಿತ ಸಂಸ್ಕೃತ ಸಂಗಮ “

ಉಜಿರೆ: ಭಾರತದ ಜ್ಞಾನ ಸಂಪತ್ತು ವಿಶಿಷ್ಟವಾದದ್ದು. ಇದನ್ನು ಅರಿತು ನಾವೆಲ್ಲರೂ ಜ್ಞಾನಿಗಳಾಗೋಣ ಎಂದು ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಹೇಳಿದರು.

ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಯೋಗದಲ್ಲಿ ” ಗಣಿತ ಸಂಸ್ಕೃತ ಸಂಗಮ ” ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಜ್ಞಾನ ಪರಂಪರೆ ತನ್ನ ಆದಿಯಿಂದಲೂ ಜಗತ್ತಿನ ಏಳಿಗೆಗೆ ವಿಶಿಷ್ಠ ವಾದ ಮೌಲ್ಯಯುತ ಸಂಪತ್ತ್ತನ್ನು ನೀಡುತ್ತಾ ಬಂದಿದೆ. ಇದನ್ನು ಕಂಡ ವಿವಿಧ ದೇಶಗಳು ಭಾರತದ ಮೇಲೆ ದಾಳಿಮಾಡುತ್ತಾ ತಮ್ಮ ಪಾಶ್ಚಾತ್ಯ ಸಂಸ್ಕೃತಿಯನ್ನು ಸ್ಥಾಪಿಸಿದ್ದಾರೆ ಎಂದರು.

ಶಾಸ್ತ್ರಗಳ ನಡುವೆ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಅಗತ್ಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪೂರೈಸಿದೆ.
ಇದ್ಕಕೆ ಅನುಗುಣವಾಗಿ ಇಂದಿನ ಈ ಕಾರ್ಯಾಗಾರ ಉಪಯುಕ್ತವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಮಾತನಾಡಿ ‘ಐ ಕೆ ಎಸ್ ಶಿಕ್ಷಣ ರೀತಿ ತಿಳಿಯುವುದರಿಂದ ದೇಶಕ್ಕೆ ಜನರಿಗೆ ಉಪಯೋಗವಾಗಲಿದೆ. ನಾವು ಕಾಣುವ ಪ್ರತಿ ವಿಷಯದಲ್ಲೂ ಭಾರತೀಯ ಜ್ಞಾನ ಪರಂಪರೆ ಅಡಗಿದೆ. ಇದನ್ನು ನಾವು ಗ್ರಹಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಇರ್ವರು ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಶ್ರೀಪತಿ ಕಲ್ಲೂರಾಯ ( ಅಧ್ಯಕ್ಷರು ವಿವೇಕಾನಂದ ಕಾಲೇಜು ಪುತ್ತೂರು ) ಮತ್ತು ಡಾ. ಸುರೇಶ್ ಬಾಬು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಸಿಬಿಐಟಿ ಹೈದ್ರಾಬಾದ್ ಇವರಿಗೆ ಗೌರವಿಸಲಾಯಿತು.

ಕಾಲೇಜಿನ ಆಡಳಿತ ಕುಲಸಚಿವ ಡಾ. ಶ್ರೀಧರ್ ಎನ್ ಭಟ್ ಸ್ವಾಗತಿಸಿ, ಗಣಿತ ವಿಭಾಗದ ಮುಖ್ಯಸ್ಥ ಬಿ ಗಣೇಶ್ ನಾಯಕ್ ವಂದಿಸಿದರು.

Related posts

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಮನಕಲಕುವ ಹೃದಯ ವಿದ್ರಾವಕ ಘಟನೆ: ನಲ್ಲೂರು ಬಳಿ ಬೈಕ್- ಮಿನಿ ಲಾರಿ ನಡುವೆ ಅಪಘಾತ: ಬೈಕ್ ನಲ್ಲಿದ್ದ ಪುಟ್ಟ ಮಕ್ಕಳು ಸೇರಿ ನಾಲ್ವರು ದುರ್ಮರಣ

Suddi Udaya

ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

Suddi Udaya

ಅರಸಿನಮಕ್ಕಿ ಸ.ಪ್ರೌ. ಶಾಲೆ ಹಾಗೂ ಗ್ರಾಮ ಪಂಚಾಯತ್ ನ ಅರಿವು ಕೇಂದ್ರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

Suddi Udaya

ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿ ತನುಷ್ ಎಂ. ಶೆಟ್ಟಿ ನೇಮಕ

Suddi Udaya

ಜ.22 – 24: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ : ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!