March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ(ದುಗ್ಗಪ್ಪ) ಸೇವಾ ನಿವೃತ್ತಿ

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಕಾರ್ಯಕ್ರಮ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಡವರ ಸಬಲೀಕರಣ ಕಾರ್ಯದ ಜೊತೆಗೆ ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಉತ್ಕೃಷ್ಟ ಕೊಡುಗೆಯನ್ನು ನೀಡಿದ ದುಗ್ಗಪ್ಪ ನವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.

ಅವರು ಕೊಯ್ಯೂರು ಗ್ರಾಮದ ದಿ. ತಿಮ್ಮಯ ಗೌಡ ಹಾಗೂ ದಿ.ಶ್ರೀಮತಿ ನೀಲಮ್ಮ ಅವರ ಪುತ್ರರಾಗಿದ್ದು ಕಡಿರುದ್ಯಾವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೇವಾನಿರತನಾಗಿ ಕರ್ತವ್ಯಕ್ಕೆ ಸೇರ್ಪಡೆಯಾಗಿ, ನಂತರ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ, ಮೇಲ್ವಿಚಾರಕರ ಹುದ್ದೆಗೆ ಭಡ್ತಿ ಹೊಂದಿ ಲಾಯಿಲ, ಉಜಿರೆ, ಕನ್ಯಾಡಿ ಮತ್ತು ಕಾರ್ಕಳದಲ್ಲಿ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸಿ, ಮೇಲ್ವಿಚಾರಕರ ಹುದ್ದೆಗೆ ಬಡ್ತಿಗೊಂಡು, ಪುತ್ತೂರು ತಾಲೂಕಿಗೆ ಯೋಜನಾಧಿಕಾರಿಯಾಗಿ ಸೇರ್ಪಡೆಗೊಂಡು 3 ವರ್ಷ ಸೇವೆ ಸಲ್ಲಿಸಿದರು. ನಿರ್ದೇಶಕರಾಗಿ ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. 2023ರಿಂದ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಜೂ.1ರಂದು ಸೇವಾ ನಿವೃತ್ತಿಯನ್ನು ಹೊಂದಿರುತ್ತಾರೆ.

Related posts

ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

Suddi Udaya

ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ವಿದ್ಯಾರ್ಥಿ ವೇತನ

Suddi Udaya

ವೇಣೂರು: ಜಯಶೀಲಾ ಪೈ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.189 ಕೋಟಿ ವಾರ್ಷಿಕ ವ್ಯವಹಾರ,ರೂ.23 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 14 ಡಿವಿಡೆಂಟ್

Suddi Udaya

ಫೆ.2-7: ಬೆಳ್ತಂಗಡಿಯಲ್ಲಿ ಮಹಾ ಸೀರೆ ಮೇಳ ವಿಶೇಷ ರಿಯಾಯಿತಿಯೊಂದಿಗೆ ವಿವಿಧ ವಿನ್ಯಾಸವುಳ್ಳ ಸೀರೆಗಳು ಲಭ್ಯ

Suddi Udaya
error: Content is protected !!