28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.189 ಕೋಟಿ ವಾರ್ಷಿಕ ವ್ಯವಹಾರ,ರೂ.23 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 14 ಡಿವಿಡೆಂಟ್

ಗುರುವಾಯನಕೆರೆ: ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾಯನಕೆರೆ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ವಿಕಾಸ ಸದನ ಸಭಾಭವನದಲ್ಲಿ ಸೆ. 23 ರಂದು ನಡೆಯಿತು.

ಸಂಘವು ವರದಿ‌ ಸಾಲಿನಲ್ಲಿ ರೂ.189 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.23 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಸದಸ್ಯರಿಗೆ ಶೇ. 14% ಡಿವಿಡೆಂಟ್ ಘೋಷಿಸಿದರು.

ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಸಂಘವು ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ದೊರಕಿವೆ ಎಂದರು‌.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಯೋಗೀಶ್ ಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡೀಸ್, ಆಡಳಿತ ಮಂಡಳಿಯ ಸದಸ್ಯರಾದ ಮೋಹನ್ ಹೆಗ್ಡೆ, ಗೋಪಿನಾಥ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ ಕೆ,ಗ್ರೆಗೋರಿ ಡಿಮೆಲ್ಲೊ, ಪ್ರವೀಣ್ ಕುಮಾರ್ ಹೆಚ್.ಎಸ್, ಜಗದೀಶ್, ಶೇಖರ ನಾಯ್ಕ,ಒಲ್ವಿನ್ ಮೋನಿಸ್ ,ದಿನೇಶ್ ನಾಯಕ್ ಬಿ, ಪ್ರವೀಣ್ ಚಂದ್ರ ಮೆಹಂದಳೆ,ಮಮತಾ ಎಂ.ಶೆಟ್ಟಿ, ಪ್ರೇಮಾವತಿ ಭಟ್ ಉಪಸ್ಥಿತರಿದ್ದರು.

ಪಲ್ಲವಿ ಪೈ ಪ್ರಾರ್ಥಿಸಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಕುಮಾರ್ ಸ್ವಾಗತಿಸಿ, ವರದಿ ಮಂಡಿಸಿದರು. ಒಲ್ವಿನ್ ಮೋನಿಸ್ ಕಾರ್ಯಕ್ರಮ‌ ನಿರೂಪಿಸಿದರು. ಸಂಘದ ನೌಕರ ವೃಂದದವರು, ಸಂಘದ ವಿವಿಧ ಬ್ರಾಂಚ್ ಗಳ ಶಾಖಾಧಿಕಾರಿಗಳು,ನಿತ್ಯ ನಿಧಿ ಸಂಗ್ರಾಹಕರು ಸಹಕರಿಸಿದರು.

Related posts

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಯಾತ್ರೆ ಕೈಗೊಂಡ ರಾಜಾಜಿನಗರದ ಶಾಸಕ ಸುರೇಶ ಕುಮಾರ್

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಜಿ.ಪಂ.ಕಿ.ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ: ಬೆಳ್ತಂಗಡಿಯಲ್ಲಿ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾಲ್ಕೂರಿನಲ್ಲಿ ಹುಲ್ಲು ಕತ್ತರಿಸುವಾಗ ನಡೆದ ಆಕಸ್ಮಿಕ ಘಟನೆ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಎರಡು ಕೈಗಳುಒಂದು ಕೈಯ ಅಂಗೈ ತುಂಡು, ಇನ್ನೊಂದು ಕೈಯ ಬೆರಳು ಕಟ್

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಸೆ.10: ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

Suddi Udaya
error: Content is protected !!