September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿ

ಚಾರ್ಮಾಡಿ: ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ

ಚಾರ್ಮಾಡಿ: ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿದ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆಯ ಹೆದ್ದಾರಿಯಲ್ಲಿ ಜೂ.8 ರಂದು ರಾತ್ರಿ 9:30 ಸುಮಾರಿಗೆ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಮತ್ತು ಸುರೇಶ್ ಇಬ್ಬರು ಉಡುಪಿ ಜಿಲ್ಲೆಯ ಕಾರ್ಕಳ ಸಂಬಂಧ ಮನೆಗೆ ಹೋಗಿ ವಾಪಸ್ ಬರುವಾಗ ಚೇತನ್ ಎಂಬಾತನ ಸಂಬಂಧಿಯ ಬೋಲೆರೋ ವಾಹನ ತೆಗೆದುಕೊಂಡು ಮೂಡಿಗೆರೆಗೆ ವಾಪಸ್ ಹೋಗುವಾಗ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದ ಕಾರಣದಿಂದ – ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ರಸ್ತೆಯ ಬದಿಯ ಕ್ರಾಂಕ್ರಿಟ್ ಚರಂಡಿಗೆ ಬಿದ್ದು ಸಿಲುಕಿಕೊಂಡಿದೆ.

ವಾಹನ ಪಲ್ಟಿ ರಭಸಕ್ಕೆ ವಾಹನದಲ್ಲಿದ್ದ ಮೂಡಿಗೆರೆಯ ಚೇತನ್ ಮತ್ತು ಸುರೇಶ್ ಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳೀಯ ಯುವಕರ ತಂಡ ಸೇರಿಕೊಂಡು ಬೊಲೆರೋ ವಾಹನವನ್ನು ಹೊರತೆಗೆದು ಸಹಕರಿಸಿದ್ದಾರೆ.

Related posts

ಎ.19-26: ಪಾರಸ್‌ ಪೃಥ್ವಿ ಜುವೆಲ್ಸ್‌ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ವಿಶೇಷ ಕೊಡುಗೆ

Suddi Udaya

ಕೆ. ಹರೀಶ್ ಕುಮಾರ್ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರಕಾರ ಆದೇಶ

Suddi Udaya

ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ನಾರಾವಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ಕುತ್ಲೂರು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

Suddi Udaya

ಬೆದ್ರಬೆಟ್ಟು ರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ

Suddi Udaya
error: Content is protected !!