ಕೊಕ್ಕಡ ಶ್ರೀರಾಮ ಸೇವಾ ಮಂದಿರದ ನೂತನ ಪಾಕಶಾಲೆಯ ಕಾಮಗಾರಿಯು ನಡೆಯುತ್ತಿದ್ದು ಇದರ ಸದುಪಯೋಗಕ್ಕಾಗಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಸುಮಾರು ರೂ. 1,08,802 ಮೊತ್ತದ ಚೆಕ್ಕನ್ನು ಇಂದು(ಜೂ.12) ಶ್ರೀ ರಾಮ ಸೇವಾ ಮಂದಿರದಲ್ಲಿ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಹಾಗೂ ಸದಸ್ಯರಾದ ಧರ್ಣಪ್ಪ ಕೆಂಪಕೋಡಿ ಇವರು ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಕಾರ್ಯದರ್ಶಿ ಶಶಿ ಕೊಕ್ಕಡ, ಕೋಶಾಧಿಕಾರಿ ಪಣಿರಾಜ್ ಜೈನ್, ಸದಸ್ಯರಾದ ರೂಪೇಶ್ ಕುಮಾರ್, ಕೀರ್ತನ್ ಭಂಡಾರಿ ಇವರಿಗೆ ಹಸ್ತಾಂತರಿಸಿದರು.
ಈ ಹಿಂದೆಯೂ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಅನುದಾನವನ್ನು ನೀಡಿತ್ತು. ಹಾಗೂ ಅನೇಕ ಸೇವಾ ಕಾರ್ಯಗಳನ್ನು ಟ್ರಸ್ಟ್ ಮಾಡುತ್ತಾ ಬಂದಿರುತ್ತದೆ.











