September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ನಾರಾವಿ ಸ.ಉ.ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಬೆಂಚು ಡೆಸ್ಕ್ ವಿತರಣೆ

ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯದ ನಾರಾವಿ ಕಾರ್ಯಕ್ಷೇತ್ರದ ನಾರಾವಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಯೋಜನೆಯ ವತಿಯಿಂದ ದೊರೆತ ರೂ. 174000 ಮೌಲ್ಯದ 20 ಜೊತೆ ಬೆಂಚು ಡೆಸ್ಕ್ ವಿತರಣಾ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ನಾರಾವಿ ವಲಯದ 7 ಶಾಲೆಗಳಿಗೆ 70 ಜೊತೆ ಬೆಂಚು ಡೆಸ್ಕ್ ವಿತರಣೆ ಆಗಿದ್ದು ಒಟ್ಟು ರೂ.6,09,000 ಮೊತ್ತದ್ದು ಆಗಿರುತ್ತದೆ. ಈ ಸಂದರ್ಭದಲ್ಲಿ ಮೂಡಬಿದ್ರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ , ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ನಾರಾವಿ ಕೃಷಿ ಪತ್ತಿನ ಬ್ಯಾಂಕಿನ ಪ್ರಬಂಧಕರಾದ ಶಶಿಕಾಂತ್ ಜೈನ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ವಲಯದ ಮೇಲ್ವಿಚಾರಕಿ ವಿಶಾಲ ಕೆ, ನಾರಾವಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ್ , ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ಹಾಗೂ ಕೃಷಿ ಪತ್ತಿನ ಎಲ್ಲಾ ನಿರ್ದೇಶಕರು, ಪಂಚಾಯತ್ ನ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು, ಶಾಲೆಯ ಶಿಕ್ಷಕ ವೃಂದದವರು, ಎಸ್. ಡಿ. ಎಂ.ಸಿ, ಸದಸ್ಯರು, ಪೋಷಕರು, ಸೇವಾಪ್ರತಿನಿಧಿಗಳು, ಹರಿಣಾಕ್ಷಿ ರೇಷ್ಮಾ ವಿ ಎಲ್ ಇ ಅನೀಷ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬಾಲಕ ಸುಮಂತ್ ಸಾವು ಪ್ರಕರಣ: ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭ

Suddi Udaya

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮುಸ್ಲಿಮ್ ಮುಖಂಡರಿಂದ ಶಾಹುಲ್ ಹಮೀದ್ ಕೆ.ಕೆ. ನೇತೃತ್ವದಲ್ಲಿ ಸಚಿವ ಝಮೀರ್ ಅಹ್ಮದ್ ಭೇಟಿ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಮಹಾವಿದ್ಯಾಲಯದಲ್ಲಿ ‘ಕಲಾಮೃತಂ’ ಸಾಂಸ್ಕೃತಿಕ ಉತ್ಸವ ಯಶಸ್ವಿ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರ’ದ ಉದ್ಘಾಟನೆ

Suddi Udaya

ಕೊಕ್ಕಡ: ಪೂವಾಜೆ ಇಬರ ರಸ್ತೆಯ ಹತ್ತಿರ ಸರ್ಕಾರಿ ಗೇರು ಪ್ಲಾಂಟೇಶನ್ ಗೆ ತಗುಲಿದ ಬೆಂಕಿ

Suddi Udaya
error: Content is protected !!