September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವತಿಯಿಂದ ಅಗ್ನಿವೀರ್ ಪುಷ್ಪರಾಜ್ ರವರಿಗೆ ಗೌರವಾರ್ಪಣೆ

ಕಳೆಂಜ: ಇಲ್ಲಿಯ ಪೆಲತ್ತಡಿ ಮನೆಯ ಸುಮಿತ್ರ ಮತ್ತು ವಿಶ್ವನಾಥ್ ದಂಪತಿಯ ಪುತ್ರ ಪುಷ್ಪರಾಜ್ ರವರು ಅಗ್ನಿವೀರ್‌ ತರಬೇತಿ ಮುಗಿಸಿ ಮುಂದಕ್ಕೆ ಕಾರ್ಗಿಲ್ ನಲ್ಲಿ ಸೇವೆ ಸಲ್ಲಿಸಲಿದ್ದು, ಆ ಪ್ರಯುಕ್ತ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವತಿಯಿಂದ ಜೂ.14ರಂದು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಧಾ ಕೃಷ್ಣ ಭಟ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪರಾಜ್ ರವರಿಗೆ ಪ್ರಸಾದ ನೀಡಿ, ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಖಜಾಂಚಿ ಕೇಶವ ಗೌಡ ಬದಿಮಾರು, ಸದಸ್ಯರಾದ ನೀಲಯ್ಯ ಗೌಡ, ಕೇಶವ ಗೌಡ ಬರಮೇಲು, ಪುಷ್ಪರಾಜ್ ರವರ ಸ್ನೇಹಿತರಾದ ಹರ್ಷಿತ್, ಭವಿತ್, ವಿತೇಶ್, ಕಾಯರ್ತಡ್ಕ ಅಂಚೆ ಪಾಲಕಿ ಸ್ಮಿತಾ, ಜೆ.ಜೆ.ಸಿ ಅಧ್ಯಕ್ಷ ಶ್ರವಣ್ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.

Related posts

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ “ಆಟಿಡೊಂಜಿ ದಿನ” ಸ್ನೇಹಭೋಜನ ಕೂಟ

Suddi Udaya

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya

ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಎಸ್.ಬಿ. ನರೇಂದ್ರ ಕುಮಾರ್ ನಿಧನ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್

Suddi Udaya

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

Suddi Udaya
error: Content is protected !!