25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಕ್ರಮವಾಗಿ ಮನೆಯಲ್ಲಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳು ವಶ

ಬೆಳ್ತಂಗಡಿ : ಓಡಿನ್ನಾಳ ಗ್ರಾಮದ ಪಣೆಜಾಲು ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಉಲಾಯಿ- ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಿಬ್ಬಂದಿ ದಾಳಿ ನಡೆಸಿ ಒಂಬತ್ತು ಮಂದಿಯನ್ನು ಬಂಧಿಸಿದ ಘಟನೆ ಜೂ. 17 ರಂದು ಸಂಜೆ ನಡೆದಿದೆ.

ದಾಳಿ ವೇಳೆ ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಮಂದಿಯನ್ನು ಬಂಧಿಸಿದ್ದು. ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ ಎಲೆಗಳನ್ನು , 6 ಮೊಬೈಲ್ ಫೋನ್, 2 ಬೈಕ್, 1 ಆಟೋ ರಿಕ್ಷಾ, 26,778 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 78,80 KP Act -1963 ಮತ್ತು ಕಲಂ 112(1) BNS 23 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ , ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್, ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಅಳದಂಗಡಿ ಸರಸ್ವತಿ ಭಟ್ ಹೃದಯಾಘಾತದಿಂದ ನಿಧನ

Suddi Udaya

ಧರ್ಮಸ್ಥಳ: ಮೃತ ದೇಹಗಳನ್ನು ಹೂತು ಹಾಕಿದ ದೂರು ಪ್ರಕರಣ ಕೇಸ್ ಫೈಲ್ ಪಡೆಯಲು ಧರ್ಮಸ್ಥಳ ಠಾಣೆಗೆ ಬಂದ ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ

Suddi Udaya

ಉಜಿರೆ: ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಗೇರುಕಟ್ಟೆಯ ಅದೀಲ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಗಣಿತ ದಿನಾಚರಣೆ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ಐಡಿಯಾಥಾನ್ ವಾರಾಚರಣೆ

Suddi Udaya
error: Content is protected !!