37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಸವಣಾಲು : ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು . ಇಲ್ಲಿನ ಹಳೆಯ ವಿದ್ಯಾರ್ಥಿ ಹಾಗೂ ಬಲಿಪ ರೆಸಾರ್ಟಿನ ಮಾಲಕರು ,ವಕೀಲರು ಮತ್ತು 2025-26 ನೇ ಸಾಲಿನ ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷರು ಆಗಿರುವ ಶ್ರೀಯುತ ಮುರಳಿ ಬಲಿಪ ಇವರು ಸುಮಾರು 13 ವರ್ಷದಿಂದ ಪ್ರತಿ ವರ್ಷವೂ ನಮ್ಮ ವಿದ್ಯಾ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬರೆಯುವ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.ಈ.ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ ಜೂ. 20ರಂದು ನೆರವೇರಿತು.


ಅಧ್ಯಕ್ಷತೆಯನ್ನು ಶ್ರೀ ದಾಮೋದರ ಬಂಗೇರ ಶಾಲಾಡಳಿತ ಸಮಿತಿಯ ಉಪಾಧ್ಯಕ್ಷರು ವಹಿಸಿದ್ದರು.ಅತಿಥಿಗಳಾಗಿ ಶಾಲಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ರೈ,ಕಾರ್ಯದರ್ಶಿ
ಶ್ರೀ ಕೂಸಪ್ಪ ಗೌಡ,,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿ, ಆಡಳಿತ ಸಮಿತಿಯ ಪದಾಧಿಕಾರಿಗಳಾದ ಶ್ರೀ ವಿವೇಕ್ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಲೋಕನಾಥ ಶೆಟ್ಟಿ, ಸೇವಾ ಕರ್ತರಾದ ಶ್ರೀ ಮುರಳಿ ಇವರ ಪುತ್ರರಾದ ಶ್ರೀ ಮಯೂರ, ಶ್ರೀ ಮಂದಾರ, ತಾಯಂದಿರ ಸಮಿತಿಯ ಅಧ್ಯಕ್ಷರಾಗಿರುವ ಶ್ರೀಮತಿ ಪ್ರೇಮಾ,, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಿ ಮಂಜುನಾಥ ಜಿ, ಶಾಲಾ ಶಿಕ್ಷಕಿಯರಾದ ಶ್ರೀಮತಿ ಮಮತಾ, ಶ್ರೀಮತಿ ಸೌಮ್ಯ, ಕು|ಶುಭ, ಕು| ಸುಷ್ಮಾ, ಕು| ವೈಶಾಲಿ,ಶಾಲಾ ವಿದ್ಯಾರ್ಥಿ ನಾಯಕ ಧನ್ ರಾಜ್ ಹೆಗ್ಡೆ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯೋಪಾಧ್ಯಾಯರು ಸ್ವಾಗತಿಸಿದರು, ಶ್ರೀಮತಿ ಸೌಮ್ಯ ಧನ್ಯವಾದ ಸಮರ್ಪಿಸಿದರು,ಕು| ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು

Related posts

ಬೆಳ್ತಂಗಡಿ ಕೇಂದ್ರ ಖಿಳರ್ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಬಕ್ರೀದ್ ಆಚರಣೆ

Suddi Udaya

ಮಾ.3 ರಿಂದ ಮಾ.11ರವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಮಾ.4ರಂದು ಡಾ. ಹೆಗ್ಗಡೆಯವರಿಂದ ನೂತನ ವಿಜಯಗೋಪುರ ಲೋಕಾರ್ಪಣೆ,

Suddi Udaya

ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್, ಕಾರ್ಯದರ್ಶಿಯಾಗಿ ಹಾರಿಶ್ ಆಯ್ಕೆ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ವರ್ಗಾವಣೆ

Suddi Udaya

ಕಣಿಯೂರು: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕನ್ಯಾಡಿ ಸ್ವಾಮೀಜಿಗಳಿಗೆ ಗೌರವಾಭಿನಂದನೆ

Suddi Udaya
error: Content is protected !!