37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೃಷ್ಣಾನಂದ ರಾವ್ ಅವಿರೋಧ ಆಯ್ಕೆ

ಬೆಳ್ತಂಗಡಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಸ್.ಡಿ.ಎಮ್ ಅನುದಾನಿತ ಪ್ರೌಢಶಾಲೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್ ಇವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸ. ಉ. ಪ್ರಾ. ಶಾಲೆ ಬದನಾಜೆಯ ನಿರಂಜನ್ , ಕೋಶಾಧಿಕಾರಿಯಾಗಿ ಅಶೋಕ್ ಸರಕಾರಿ ಪ್ರೌಢಶಾಲೆ ಹಳೇಪೇಟೆ ಉಜಿರೆ ಇವರು ಆಯ್ಕೆಯಾಗಿರುತ್ತಾರೆ .

ಸಂಘದ ಗೌರವ ಅಧ್ಯಕ್ಷರಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ, ಸಂಘದ ಉಪಾಧ್ಯಕ್ಷರಾಗಿ ವೆಂಕಟೇಶ್ ಭಟ್ ಗುರುವಾಯನಕೆರೆ ಹಾಗೂ ಕೇವನ್ ಅಳದಂಗಡಿ , ಜಂಟಿ ಕಾರ್ಯದರ್ಶಿಯಾಗಿ ಶೀನಪ್ಪ ಗೌಡ ಪುದುವೆಟ್ಟು ಹಾಗೂ ಪ್ರವೀಣ್ ಎನ್ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ಗೇರುಕಟ್ಟೆ ಹಾಗೂ ಶೇಖರ್ ಅಳದಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಗುಣಪಾಲ್ ಎಂ ಎಸ್ ಮುಂಡಾಜೆ ಹಾಗೂ ಶ್ರೀಮತಿ ಪದ್ಮಶ್ರೀ ಜೈನ್ ಕಾಶಿಪಟ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ತ್ರಿಶಲಾ ಜೈನ್ ಕರ್ನೂಡಿ ಲಾಯಿಲ, ಪತ್ರಿಕಾ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಲಾಯಿಲ, ಆಂತರಿಕ ಲೆಕ್ಕ ಪರಿಶೋಧಕರಾಗಿ ವಿಠಲ್ ನಾಯಕ್ ಬದನಾಜೆ ಆಯ್ಕೆ ಆಗಿರುತ್ತಾರೆ.

Related posts

ಸಂಪೂರ್ಣ ಹದಗೆಟ್ಟ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ: ಅನುದಾನ ಬಿಡುಗಡೆಗೊಳಿಸುವಂತೆ ಸಚಿವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ‘ಸಸ್ಯ ಶ್ಯಾಮಲ’ ಜಿಲ್ಲಾ ಮಟ್ಟದ ಕಾರ್ಯಕ್ರಮದಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮದ ಉದ್ಘಾಟನೆ

Suddi Udaya

ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಶಟಲ್ ಪಂದ್ಯಾಟ: ಅನುಗ್ರಹ ಆಂ.ಮಾ. ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಷರೋತ್ಸವ: ನಾಡು – ನುಡಿಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Suddi Udaya
error: Content is protected !!