September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಯಕ್ಷಭಾರತಿ ಕನ್ಯಾಡಿ ವತಿಯಿಂದ ವಿಶ್ವ ಯೋಗ ದಿನಾಚರಣೆ

ಕನ್ಯಾಡಿ : ಯಕ್ಷಭಾರತಿ ಕನ್ಯಾಡಿ ವತಿಯಿಂದ ವಿಶ್ವ ಯೋಗದಿನಾಚರಣೆಯು ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರುಗಿತು. ಕನ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಹರೀಶ ರಾವ್ ಮುಂಡ್ರುಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ನಿತ್ಯ ಅನುಷ್ಠಾನ ಸ್ವಸ್ತ ಮನಸ್ಸು, ಆರೋಗ್ಯ ಹೊಂದಲು ಸಾಧ್ಯವೆಂದರು.

ಉಜಿರೆಯ ಎಸ್ ಡಿ ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಡಾ. ಅಭಿಷೇಕ್ ಪೂಜಾರಿ ಯೋಗದ ಅಷ್ಟಾಂಗಗಳ ಬಗ್ಗೆ ಮಾಹಿತಿ ನೀಡಿ ಸರಳವಾಗಿ ಮಾಡುವ ಯೋಗ ಕ್ರಿಯೆಗಳ ಪ್ರಾತ್ಯಕ್ಷಿಕೆಯನ್ನು ನೀಡಿ ಪ್ರಶ್ನೆಗಳಿಗೆ ಉತ್ತರಿಸಿದರು. ಯಕ್ಷಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಾಡಿತ್ತಾಯರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಯಕ್ಷಗಾನ ಡಿಪ್ಲೊಮಾದಲ್ಲಿ ಡಿಸ್ಟಿಂಕ್ಷನ್ ಪಡೆದ ಸಂಸ್ಥೆಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅವರನ್ನು ಅಭಿನಂದಿಸಲಾಯಿತು.

ಯಕ್ಷ ಭಾರತಿಯ ಟ್ರಸ್ಟಿಗಳಾದ ಹರಿದಾಸ ಗಾಂಭೀರ, ಮಹೇಶ ಕನ್ಯಾಡಿ, ಕುಸುಮಾಕರ ಕೊತ್ತೋಡಿ, ಸೂರ್ಯಾನಂದ ರಾವ್ ಹಾಗೂ ಸಂಸ್ಥೆಯ ಆಹ್ವಾನಿತ ಸದಸ್ಯರಾದ ಕೌಶಿಕ್ ರಾವ್ ಉಪಸ್ಥಿತರಿದ್ದು ಸಹಕಾರ ನೀಡಿದರು.

ಕು. ಪ್ರತೀಕ್ಷ, ಕು. ಹರಿಪ್ರಿಯ ಪ್ರಾರ್ಥಿಸಿದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿಕ್ತಾಯ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related posts

ಸಬ್ ಸ್ಟೇಷನ್ಗಳನ್ನು ನಿರ್ಮಿಸಿ ಬೆಳ್ತಂಗಡಿ ತಾಲೂಕಿನ ಜನರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಅಭಿವೃದ್ದಿ ಪಡಿಸಬೇಕೆಂದು ಶಾಸಕ ಹರೀಶ್ ಪೂಂಜರಿಂದ ಇಂಧನ ಸಚಿವರಿಗೆ ಮನವಿ

Suddi Udaya

ಬೆಳ್ತಂಗಡಿ: ಜಯಲಕ್ಷ್ಮಿ ಲೇತ್ ಅಂಡ್ ಇಂಜಿನಿಯರಿಂಗ್ ವರ್ಕ್ ಶಾಪ್ ಪುನರಾರಂಭ

Suddi Udaya

ಧರ್ಮಸ್ಥಳ ಅಶೋಕನಗರದಲ್ಲಿ77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ: ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

Suddi Udaya

ಡಾ| ವೀಣಾ ಬನ್ನಂಜೆ ಅವರಿಂದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹ

Suddi Udaya
error: Content is protected !!