37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪಟ್ರಮೆ ಗ್ರಾಮ ಪಂಚಾಯತ್ ಬಳಿ ಬಿಜೆಪಿ ಪ್ರತಿಭಟನೆ

ಪಟ್ರಮೆ : ಬಿಜೆಪಿ ಕಾರ್ಯಕರ್ತ ಜಯರಾಮ್ ರವರ ಮನೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸವನ್ನು ಪುಷ್ಪನಮನದ ಮೂಲಕ ನಡೆಸಿ ಅಲ್ಲಿಂದ ಮೆರವಣಿಗೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪಟ್ರಮೆ ಗ್ರಾಮ ಪಂಚಾಯತ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರಮುಖ ಭಾಷಣಕಾರರಾಗಿ ಸಂದೀಪ್ ರೈ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಪಂಚಾಯತ್ ಮಟ್ಟದಲ್ಲಿ ಈಗಿನ ಸರಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.

9/11 ಸಮಸ್ಯೆ, ಅಕ್ರಮ ಸಕ್ರಮ ಸಮಸ್ಯೆ, ವಿದ್ಯುತ್ ದರ ಸಮಸ್ಯೆ, ವಸತಿ ಸಮಸ್ಯೆ, ಕೆಂಪು ಕಲ್ಲು ನಿಷೇಧ, ಬಿಪಿಎಲ್ ಕಾರ್ಡು ರದ್ಧತಿ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಮುಂತಾದ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಯಿತು.


ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷ ಮನೋಜ್, ಹಾಗೂ ಸದಸ್ಯರು, ಶಕ್ತಿಕೇಂದ್ರ ಪ್ರಮುಖ್ ಡಾಗಯ್ಯ ಗೌಡ, ಸೊಸೈಟಿ ನಿರ್ದೇಶಕರುಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಘಟಕದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ವೇಣೂರಿನಲ್ಲಿ ಶ್ರೀಕೃಷ್ಣ ಮಾರ್ಟ್ ಶುಭಾರಂಭ

Suddi Udaya

ರಕ್ತೇಶ್ವರಿ ಪದವು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪೋಷಣಾ ಅಭಿಯಾನ

Suddi Udaya

ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ, ಅಕ್ಕಮ್ಮ ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗಿರಿಜಾ ಮಡಿವಾಳ ನಿಧನ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ

Suddi Udaya
error: Content is protected !!