37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆ

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

ಗೇರುಕಟ್ಟೆ; ಭಾರತೀಯ ಜನತಾ ಪಾರ್ಟಿ ಕಳಿಯ ಮತ್ತು ನ್ಯಾಯತರ್ಪು ಶಕ್ತಿಕೇಂದ್ರ ವತಿಯಿಂದ ರಾಜ್ಯದ ಕಾಂಗ್ರೇಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾಮ‌ ಪಂಚಾಯತ್ ಎದುರು ಜೂ.23 ರಂದು ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ, ಸಹಕಾರ ಭಾರತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಪೆಂರ್ಬುಡ ಮಾತನಾಡಿ, ರಾಜ್ಯದ ಸಿದ್ಧರಾಮಯ್ಯ ನೇತ್ರತ್ವದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಂಗ್ರೇಸ್ ಶಾಸಕರೇ ಸರಕಾರದ ಭ್ರಷ್ಠಾಚಾರದ ವಿರುದ್ದ ಮಾತನಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗುತ್ತಿದ್ದ 9/11 ಮೂಡ ಕ್ಕೆ ವರ್ಗಾಯಿಸುವ ಮೂಲಕ ಪಂಚಾಯತ್ ಆಡಳಿತಕ್ಕೆ ಬೆಲೆ ಇಲ್ಲದಂತೆ ಮಾಡಿರುವ ಜೊತೆಗೆ ಜನಸಾಮಾನ್ಯರಿಗೆ ವಿನಾಕಾರಣ ಅಲೆದಾಟ ಮಾಡುವ ಪರಿಸ್ಥಿತಿ ಸರ್ಕಾರ ಮಾಡಿದೆ.ಇದರ ಹಿಂದೆ ಸಚಿವರ ಜೇಬು ತುಂಬಿಸುವ ಹುನ್ನಾರ ಇದೆ ಎಂದರು.


ಕುವೆಟ್ಟು ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಕಳಿಯ ಶಕ್ತಿಕೇಂದ್ರ ಅಧ್ಯಕ್ಷ ಕರುಣಾಕರ್ ಕೊರಂಜ, ನ್ಯಾಯತರ್ಪು ಶಕ್ತಿಕೇಂದ್ರ ಶಕ್ತಿಕೇಂದ್ರ ಅಧ್ಯಕ್ಷ ವಿಜಯ ಗೌಡ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ್ ಎಂ., ಉಪಾಧ್ಯಕ್ಷೆ ಇಂದಿರ ಶೆಟ್ಟಿ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಹರೀಶ್ ಗೌಡ, ಕಾರ್ಯಕಾರಿಣಿ ಸದಸ್ಯ ಶೇಖರ ನಾಯ್ಕ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಾಳ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಸೋಮಪ್ಪ ಕುಬಾಯ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ಯಶೋಧರ ಶೆಟ್ಟಿ, ಸುಭಾಷಿಣಿ ಜನಾರ್ದನ, ಸಿಎ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ, ಕೇಶವ ಪೂಜಾರಿ, ಲೋಕೇಶ್ ನಾಳ ಮಮತಾ ಆಳ್ವ, ಬೂತ್ ಸಮಿತಿ ಅಧ್ಯಕ್ಷರಾದ ನವೀನ್ ಶೆಟ್ಡಿ, ಸಿದ್ದಪ್ಪ ಗೌಡ, ಕಾರ್ಯದರ್ಶಿಗಳಾದ ನಂದೀಶ್, ಗಣೇಶ್ ಕೆಬಿ ರೋಡ್, ವಸಂತ ಕಲಾಯಿದೊಟ್ಟು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು…

Related posts

ನ.24: ಅಳದಂಗಡಿಯಲ್ಲಿ ತೃಷಾ ಮೆಡಿಕಲ್ಸ್ ಶುಭಾರಂಭ

Suddi Udaya

ಬೆಳ್ತಂಗಡಿ ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರ್ ಶ್ರೀಮತಿ ಉಷಾರಾಣಿ ಭೇಟಿ

Suddi Udaya

ನಡ ಸರ್ಕಾರಿ ಪದವಿಪೂರ್ವ ಕಾಲೇಜು: ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಸೌತಡ್ಕ: ‘ಜ್ಯೋತಿ’ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ

Suddi Udaya

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya
error: Content is protected !!