22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

ಇಂದಬೆಟ್ಟು: ಇಂದಬೆಟ್ಟು ಗ್ರಾಮದ ಪೇರದ್ದಪಲ್ಕೆ ಹಾನಿಬೆಟ್ಟು ಸರ್ವೇ ನಂಬರ್೨೩೪/*/ ರಲ್ಲಿರುವ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕೆ ಪಂಚಾಯತದಿಂದ ಮೀಸಲಿರಿಸಲು ಸೂಕ್ತ ಸ್ಥಳವೆಂದು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ, ತಹಶೀಲ್ದಾರರಿಗೆ ನೀಡಿದ ಮನವಿಯಂತೆ ಬೆಳ್ತಂಗಡಿ ತಹಶೀಲ್ದಾರ್‌ರವರು ಆದೇಶ ಸಂಖ್ಯೆ ಓಅಖಅಖ ೧೮೧/೨೦೨೩.೨೪ ರಂತೆ ಅತಿಕ್ರಮಣವನ್ನು ತೆರವುಗೊಳಿಸಿ ಸರ್ಕಾರದ ಸ್ವಾಧೀನಕ್ಕೆ ಕಂದಾಯ ಇಲಾಖೆ ಜೂ.೪ರಂದು ಪಡೆದುಕೊಂಡಿದ್ದರು.

ಇದೀಗ ತಹಶೀಲ್ದಾರ್ ಅತಿಕ್ರಮಣ ತೆರವಿಗೆ ಮಾಡಿದ ಸಂಪೂರ್ಣ ಪ್ರಕ್ರಿಯೆನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಾಜು ಚಾಕೋ ಎಂ. ಅವರಿಗೆ ಜಾಗ ಮಾರಾಟ ಮಾಡಿದವರು ಸದ್ರಿ ಸರಕಾರಿ ಸ್ಥಳಕ್ಕೆ ಬೇಲಿ ಹಾಕಿ ಸುಮಾರ ೫೦ ವರ್ಷಗಳಿಂದ ಸ್ವಾಧೀನ ಹೊಂದಿ ಅದರಲ್ಲಿದ್ದ ೪೫ ವರ್ಷದ ರಬ್ಬರ್ ಗಿಡಗಳನ್ನು ಕಡಿದು ಅದರಲ್ಲಿ ತೆಂಗು ಹಾಗೂ ಇತರ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದರು.

ಸದ್ರಿ ಸ್ಥಳವು ಚಾಕೋ ಅವರ ಕ್ರಮವರಿಸಿದ ಸ್ಥಳಗಳ ಹಕ್ಕಿನ ಸ್ಥಳಗಳಾಗಿದ್ದು, ಅವುಗಳನ್ನು ಈಗಲೂ ಸ್ವಾಧೀನ ಹೊಂದಿದ್ದಾರೆ. ಅವರಿಗೆ ಸರಿಯಾದ ಅವಕಾಶ ನೀಡದೆ ಜೂ.೬ರಂದು ಅತಿಕ್ರಮ ತೆರವಿಗೆ ಕ್ರಮ ಜರುಗಿಸುವುದಾಗಿ ತಹಶೀಲ್ದಾರರು ಜೂ.೪ರಂದು ನೋಟಿಸ್ ಜಾರಿಗೊಳಿಸಿ ಅದರಂತೆ ಕಾನೂನು ಕಾರ್ಯಚರಣೆ ನಡೆಸಿದರು ಎಂದು ಸಾಜು ಎಂ.ಚಾಕೋರವರು ಕರ್ನಾಟಕ ಉಚ್ಚಾ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸಿ, ಅತಿಕ್ರಮ ತೆರವುಗೊಳಿಸುವ ತಹಶೀಲ್ದಾರ್ ಕ್ರಮವನ್ನು ರದ್ದುಗೊಳಿಸುವಂತೆ ಕೋರಿದ್ದರು.

ಸದ್ರಿ ಪ್ರಕರಣ ಸಹಾಯಕ ಕಮೀಷನರ್‌ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದು, ಚಾಕೋರವರು ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಈ ಆಕ್ಷೇಪಣೆ ವಿಲೇವಾರಿಯಾಗದೆ ತಹಶೀಲ್ದಾರರು ಅತಿಕ್ರಮಣ ತೆರವಿಗೆ ಕೈಗೊಂಡಿರುವ ಕ್ರಮವು ಸಮ0ಜಸವಲ್ಲವೆಂದು ಮನಗಂಡ ಹೈಕೋರ್ಟ್ ತಹಶೀಲ್ದಾರ್ ರವರ ಅತಿಕ್ರಮಣ ತೆರವಿನ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಚಾಕೋ ಪರವಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿ ಎಸ್. ರಾಜಶೇಖರ್ ಮತ್ತು ನ್ಯಾಯವಾದಿ ಪ್ರಸಾದ್ ಕೆ.ಎಸ್ ಬೆಳ್ತಂಗಡಿ ವಾದಿಸಿದ್ದರು.

Related posts

ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಮ್ ಸಾಂಗ್ ಬಿಡುಗಡೆ

Suddi Udaya

ಸೋಮಂತಡ್ಕ ಬಳಿ ಕಾರು- ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಯುವ ಪೋಟೋಗ್ರಾಫರ್ ಗಣೇಶ್ ಗೌಡ ಕಳೆಂಜ ಸಾವು

Suddi Udaya

ಕುವೆಟ್ಟು: ಸ. ಉ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಬೆಳಾಲು : ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜ

Suddi Udaya

ವೇಣೂರು ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!