ಉಜಿರೆ: ಅನುಗ್ರಹ ಪದವಿಪೂರ್ವ ಕಾಲೆಜಿನ 2025-26 ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘವನ್ನು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ| ವಿಜಯ್ ಲೋಬೋರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು,
ಅಧ್ಯಕ್ಷೆಯಾಗಿ ಹೆಝಲ್ ಜಿಶಾ ಪಿಂಟೋ, ಕಾರ್ಯದರ್ಶಿಯಾಗಿ ಹಲೀಮಾ ನಜ್‌ಮೀನ್, ಜತೆ ಕಾರ್ಯದರ್ಶಿಯಾಗಿ ಅನೂಪ್ ಕೃಷ್ಣ ಬೇಕಲ್, ಕ್ರೀಡಾ ಕಾರ್ಯದರ್ಶಿಯಾಗಿ ಲೆಸ್ಲೀ ಪಿಂಟೋ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯೆಶ ಫಾಮ ,ಕನ್ನಡ ಸಂಘದ ಕಾರ್ಯದರ್ಶಿಯಾಗಿ ಫಾತಿಮ ಶಾಬಿರಾ, ವಾಣಿಜ್ಯ ಸಂಘದ ಕಾರ್ಯದರ್ಶಿಯಾಗಿ ಮಾರ್ಕ್ ರಿಶೋನ್ ಡಿಸೋಜ, ಹಿಂದಿ ಸಂಘದ ಕಾರ್ಯದರ್ಶಿಯಾಗಿ ಹಾಜಿರಾ, ಭಿತ್ತಿ ಪತ್ರಿಕೆ ಸಂಘದ ಕಾರ್ಯದರ್ಶಿಯಾಗಿ ನೌಷಿಯ ಇವರುಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಉಪನ್ಯಾಸಕ ಅರುಣ್ ಕುಮಾರ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.











