March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಭಾರತೀಯ ಜೈನ್ ಮಿಲನ್ ವತಿಯಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್‌ರವರಿಗೆ ಅಭಿನಂದನೆ

ವೇಣೂರು: ಇಲ್ಲಿಯ ಭಾರತೀಯ ಜೈನ್ ಮಿಲನ್ ವೇಣೂರು ಘಟದ ಸಭೆಯು ವೇಣೂರು ಯಾತ್ರಿ ನಿವಾಸದಲ್ಲಿ ಜರುಗಿತು.

ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಸುಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಪ.ಪೂ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಭಾರತೀಯ ಜೈನ್ ಮಿಲನ್ ವಲಯ ೮ರ ನಿರ್ದೇಶಕ ಪ್ರಮೋದ್ ಕುಮಾರ್ ಬಿ., ಜೈನ್ ಮಿಲನ್ ಕಾರ್ಯದರ್ಶಿ ಬಿ. ನಿರ್ಮಲ್ ಕುಮಾರ್ ಬೊಲ್ಜಾಲ್ ಉಪಸ್ಥಿತರಿದ್ದರು. ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ಅರ್ಹವಾಗಿ ಪ್ರತಿಷ್ಠಿತ ವಿಜಯರತ್ನ ಪ್ರಶÀಸ್ತಿಯಿಂದ ಪುರಸ್ಕೃತಗೊಂಡಿರುವ ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್‌ರವರನ್ನು ಅಭಿನಂದಿಸಿ ಗೌರವಿಸಲಾಯಿತು.


ಈ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೦ ಅಂಕಗಳನ್ನು ಪಡೆದು ರಾಜ್ಯಕ್ಕೆ ೬ನೇ ಸ್ಥಾನ ಪಡೆದ ಸರ್ವಾರ್ಥ್ ಎಸ್. ಜೈನ್ ಸೇರಿದಂತೆ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರುಗಿತು.
ಈ ಸಂದರ್ಭ ಅರಿಹಂತ ವಿಷನ್ ಇನ್ ಟ್ರಾಕ್ಸ್ನ ವಿ.ಎಸ್. ಜಯರಾಜ್, ನಮನ ಕ್ಲಿನಿಕ್‌ನ ವೈದ್ಯರಾದ ಡಾ| ಶಾಂತಿಪ್ರಸಾದ್, ಪಾರ್ಶ್ವನಾಥ್ ಪ್ರಿಂರ‍್ಸ್ನ ಸುದತ್ ಜೈನ್, ಅರುಣ್ ಕುಮಾರ್ ಐದಲ್ಕೆ, ಬಿ.ವಿ. ಸುನೀಲ್ ಕುಮಾರ್ ಮುದ್ದಾಡಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.


Related posts

ಎ.12: ಅಳದಂಗಡಿ ಹನುಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರಿಗೆ “ಮಹಾಭಿವಂದ್ಯ” ಗೌರವಾಭಿನಂದನೆ

Suddi Udaya

ಯಕ್ಷಭಾರತಿ ಕನ್ಯಾಡಿ ಸಂಸ್ಥೆಯು ಪುರಸ್ಕರಿಸುವ ಯಕ್ಷಭಾರತಿ ಪ್ರಶಸ್ತಿಗೆ ಮೂಡಬಿದರೆಯ ಕೆ ಶ್ರೀಪತಿ ಭಟ್ ಆಯ್ಕೆ

Suddi Udaya

ಸಾವ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಆಶಾ ಅವರಿಗೆ ಕ್ಷೀರರತ್ನ ಪ್ರಶಸ್ತಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ನಾವರ ನಿವಾಸಿ ಸುಂದರಿ ನಿಧನ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

Suddi Udaya
error: Content is protected !!