ಕೊಯ್ಯೂರು: ಇಲ್ಲಿನ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್‍ಯಕ್ರಮ ಜೂ. 27ರಂದು ನಡೆಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಲಕ್ಷ್ಮೀ ಗ್ರೂಪ್ ಆಫ್ ಇಂಡಸ್ಟ್ರೀಸ್ ಉಜಿರೆ ಇಲ್ಲಿನ ಮಾಲಕ ಮೋಹನ್ ಕುಮಾರ್ ಹಾಗೂ ತಂಡದವರು ಶಾಲೆಗೆ ಆಗಮಿಸಿ 1ರಿಂದ 7 ನೇ ತರಗತಿವರೆಗೆ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಕೊಡೆ ಹಾಗೂ ಬ್ಯಾಗ್ ಗಳನ್ನು ವಿತರಿಸಿದರು. ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿ ಚೆನ್ನಾಗಿ ಕಲಿಯಬೇಕೆಂದು ಸಲಹೆ ನೀಡಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ವಿನಯ್ ಕೆ. ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.











