September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರಾಜ ಕೇಸರಿ ಟ್ರಸ್ಟ್ ವತಿಯಿಂದ 563 ನೇ ಸೇವಾ ಯೋಜನೆ ಅಂಗವಾಗಿ 3 ಸರಕಾರಿ ಶಾಲೆಗಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಣೆ

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 563 ಸೇವಾ ಯೋಜನೆ ಅಂಗವಾಗಿ 3 ಶಾಲೆಗಳಾದ ಉಜಿರೆ ಸಿದ್ದಾವನ ನೀರಚಿಲುಮೆ ಸ.ಕಿ.ಪ್ರಾ. ಶಾಲೆ ಮತ್ತು ಪಿಲ್ಯ ಸ.ಕಿ.ಪ್ರಾ. ಶಾಲೆ , ಹೊಸಪಟ್ಣ ಸ.ಕಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಪುಸ್ತಕ ವಿತರಣೆ ಮಾಡಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆರೆಯುತ್ತ ಹೋಗುತ್ತಾರೆ. ನಾವು ಮೊದಲು ನಮ್ಮ ಪರಿಸರದ ಸರಕಾರಿ ಶಾಲೆಯನ್ನು ಪ್ರೀತಿಸೋಣ ಎಂದು ರಾಜ ಕೇಸರಿ ಸಂಘಟನೆಯು ಕಳೆದ 13 ವರ್ಷಗಳಿಂದ ತನ್ನ ಕೈಲಾದ ಸೇವೆ ಮೂಲಕ ಇಡೀ ರಾಜ್ಯಮಟ್ಟದಲ್ಲೇ ಅತ್ಯುತ್ತಮ ಕಾರ್ಯಕ್ರಮಗಳನ್ನು ನಿರ್ವಹಿಸಿ ಕೂಡ ಬಂದಿದೆ. ಕೋರೋಣ ಸಂದರ್ಭದಲ್ಲಿ ಮೃತಪಟ್ಟಹ ವ್ಯಕ್ತಿಗಳನ್ನ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಇವರ ಸಾಧನೆಯನ್ನು ಮೆಚ್ಚುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಸರಕಾರಿ ಶಾಲೆ ಉಳಿಯುವುದಕ್ಕೋಸ್ಕರ ಶ್ರಮಪಟ್ಟು ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ ರಾಜಕೇಸರಿ ಸಂಘಟನೆ ಸರಕಾರಿ ಶಾಲೆಗಳಿಗೆ ದಾನಿಗಳ ಮುಖಾಂತರ ತಮ್ಮ ಕೈಲಾದ ಸೇವೆ ಮೂಲಕ ಪುಸ್ತಕ ಬ್ಯಾಗ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಜಿರೆ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್ ಸಿ ಅಧ್ಯಕ್ಷ ದಯಾನಂದ ಪೂಜಾರಿ, ಬಜಿರೆ ವೇಣೂರು ಗ್ರಾ.ಪಂ. ಸದಸ್ಯರಾದ ಸುನಿಲ್, ಪ್ರವೀಣ್ ಪೂಜಾರಿ ಜಾರಿಗೆದಡಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಸುಮಿತ್ರ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಅಧ್ಯಕ್ಷ ಸತೀಶ್ ಕಂಗಿತ್ತಿಲ್, ಸಂಚಾಲಕರಾದ ಜಗದೀಶ್ ಲಾಯಿಲ, ಸಹಸಂಚಲಕ ಶರತ್ ಕರಾಯ, ಸಂಘಟನಾ ಕಾರ್ಯದರ್ಶಿ ವಿನೋದ್ ಲಾಯಿಲ, ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್, ವಿದ್ಯಾರ್ಥಿ ಪ್ರಮುಖ ಸಂದೇಶ್ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ವಿದ್ಯಾ.ಕೆ ಸ್ವಾಗತಿಸಿ, ಸಹ ಶಿಕ್ಷಕಿಯಾದ ಭವ್ಯ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ : ಬೆನಕ ಹೆಲ್ತ್ ಸೆಂಟರ್ ನಲ್ಲಿ ಯಶಸ್ವಿನಿ ಯೋಜನೆಯಲ್ಲಿ ಯಶಸ್ವಿ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ

Suddi Udaya

ಶಿಬಾಜೆ: ಕಾಡುಹಿತ್ತಿಲು ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya

ಅಂಚೆ ವಿತರಕರಾಗಿ ಸೇವೆ ಸಲ್ಲಿಸಿದ ನಿಡ್ಲೆಯ ಮಹೇಶ್ ಬಿರ್ಲಾಜೆ ಹಾಗೂ ಪುದುವೆಟ್ಟು ಅಂಚೆ ಕಚೇರಿಯ ಬಾಲಕೃಷ್ಣ ಸುರುಳಿ ಪದೋನ್ನತಿಗೊಂಡು ವರ್ಗಾವಣೆ : ಧರ್ಮಸ್ಥಳ ಅಂಚೆ ಕಚೇರಿಯಿಂದ ಬಿಳ್ಕೋಡುಗೆ

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ: ಬದುಕಿನ ಸ್ಫೂರ್ತಿ ಪಡೆಯಲು ಎನ್ನೆನ್ನೆಸ್ ಅಡಿಪಾಯ – ಎ. ಜೀವಂಧರ ಕುಮಾರ್

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪ.ಪೂ. ವಿಭಾಗದಲ್ಲಿ “ಹೂಡಿಕೆಯ ವಿವಿಧ ಅವಕಾಶ” ಗಳ ಕುರಿತು ಕಾರ್ಯಾಗಾರ

Suddi Udaya

ಉಳ್ತೂರು: ದರ್ಸ್ ವಾರ್ಷಿಕ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

Suddi Udaya
error: Content is protected !!