March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೊಸಂಗಡಿ : ಪರಿಸರ ಮಾಹಿತಿ ಗಿಡ ನಾಟಿ ಕಾರ್ಯಕ್ರಮ

ಹೊಸಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಗುರುವಾಯನಕೆರೆ ಹಾಗೂ ಸ.ಹಿ,ಪ್ರಾ ಶಾಲೆ ಕಾಶಿಪಟ್ಣ ಇವರ ಸಹಕಾರದೊಂದಿಗೆ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಸುಬ್ಬಣ್ಣ ಪೂಜಾರಿ ಗಿಡ ನಾಟಿ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಪರಿಸರ ಜಾಗೃತಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಪ್ರಾಣಿ ಪಕ್ಷಿಗಳಿಗೆ ಎಲ್ಲಾ ಸಮಯದಲ್ಲಿ ಆಹಾರ ಸಿಗುವಂತೆ ಹೆಚ್ಚು ಹೆಚ್ಚು ಹಣ್ಣಿನ ಗಿಡವನ್ನ ನಾಟಿ ಮಾಡುತ್ತಿದ್ದು ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ ಅದನ್ನ ನಾವು ರಕ್ಷಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಗಿಡ ನಾಟಿ ಕಾರ್ಯಕ್ರಮವನ್ನು ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿದ್ಯಾನಂದ ಪೂಜಾರಿಯವರು ಹಣ್ಣಿನ ಗಿಡ ನಾಟಿ ಮಾಡುವ ಮುಖಾಂತರ ಚಾಲನೆ ನೀಡಿ ಪರಿಸರ ನಾಶದಿಂದ ಮನುಕುಲಕ್ಕೆ ಆಗುವ ತೊಂದರೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಶ್ರೀಮತಿ ವೀಣಾ, ಒಕ್ಕೂಟ ಅಧ್ಯಕ್ಷ ಸಂಜೀವ, ಜಯಂತಿ, ಕಾಂತಪ್ಪ ಪೂಜಾರಿ,
ವಿಪತ್ತು ನಿರ್ವಹಣಾ ಘಟಕ ಸದಸ್ಯರು ಗಿಡ ನಾಟಿ ಮಾಡುವ ಮೂಲಕ ಶ್ರಮದಾನದಲ್ಲಿ ಭಾಗವಹಿಸಿದರು. ಒಕ್ಕೂಟದ ಉಪಾಧ್ಯಕ್ಷರು, ಮುಖ್ಯೋಪಾಧ್ಯಾಯರು ,ಶ್ರೀಮತಿ ವಸೂದ ಸೇವಾಪ್ರತಿನಿಧಿ ಶಶಿಕಲಾ ಹಾಗೂ ಮಮತಾ ಹಾಗೂ ಶಾಲಾ ಶಿಕ್ಷಕ ವೃಂದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.

Related posts

ಮಾಜಿ ಶಾಸಕ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ವಿ.ಹಿಂ.ಪ. ಬಜರಂಗದಳ ಪ್ರಖಂಡರಿಂದ ಸಂತಾಪ

Suddi Udaya

ಕಳೆಂಜ: ಭಾರಿ ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ

Suddi Udaya

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ : ದಾನಿಗಳಿಗೆ ಗೌರವಾರ್ಪಣೆ

Suddi Udaya

ಕಲ್ಲೇರಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ: ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡದಿಂದ ತನಿಖೆ

Suddi Udaya
error: Content is protected !!