September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ : ದಾನಿಗಳಿಗೆ ಗೌರವಾರ್ಪಣೆ

ಉಜಿರೆ: ಪವಾಡ ಪುರುಷ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ, ದುರಸ್ತಿ ಹಾಗೂ ನವೀಕರಣಗೊಂಡ
ಉಜಿರೆಯ ಸಂತ ಅಂತೋನಿ ಕ್ರೈಸ್ತ ದೇವಾಲಯದ‌ ಉದ್ಟಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ
ಡಿ. 22ರಂದು ನಡೆಯಿತು.

ಮಂಗಳೂರು ಧಮ೯ಪ್ರಾಂತ್ಯದ ಧಮ೯ಧ್ಯಕ್ಷರಾದ ರೈ. ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಅಧ್ಯಕ್ಷತೆ ವಹಿಸಿ, ನವೀಕರಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಜಿರೆ ಮೊಹಿದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಯು.ಹೆಚ್ ಭಾಗವಹಿಸಿದ್ದರು.

ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಅ. ವಂ. ವಾಲ್ಟರ್ ಡಿಮೆಲ್ಲೊರವರು, ಉಜಿರೆ ಧರ್ಮಕೇಂದ್ರದ ಧರ್ಮಗುರು ವಂ. ಆಬೆಲ್ ಲೋಬೋ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ. ವಿಜಯ್ ಲೋಬೊ, ಚಚ್೯ ಪಾಲನಾ ಸಮಿತಿ ಉಪಾಧ್ಯಕ್ಷ ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್,
ಶ್ರೀಮತಿ ಲವೀನಾ ಸಾಂತ್ಯೋರ ಆಯೋಗಾಂಚಿ ಸಂಯೋಜಕಿ ಉಪಸ್ಥಿತರಿದ್ದರು.


ವಲಯದ ಮತ್ತು ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಹಾಗೂ ಇನ್ನಿತರ ಗುರುಗಳು, ಧರ್ಮ ಭಗೀನಿಯರು, ಕ್ರೈಸ್ತ ಭಾಂದವರು ಭಾಗವಹಿಸಿದರು.

ಉಜಿರೆ ಧರ್ಮಕೇಂದ್ರದ ಧರ್ಮಗುರು ವಂ. ಆಬೆಲ್ ಲೋಬೋ ಸ್ವಾಗತಿಸಿದರು. ವಿಶಾಲ್ ಪಿಂಟೋ ಕಾಯ೯ಕ್ರಮ ನಿರೂಪಿಸಿದರು.

Related posts

ಶಿಕ್ಷಕಿ ಮಾಲತಿ ಶಿಶಿಲ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

Suddi Udaya

ಎಸ್.ಡಿ.ಎಂ ಮಸ್ಟರಿಂಗ್ ಕೇಂದ್ರದಿಂದ ತಾಲೂಕಿನ 241 ಮತಗಟ್ಟೆಗಳಿಗೆ ಮತಯಂತ್ರಯೊಂದಿಗೆ ತೆರಳಿದ ಚುನಾವಣಾ ಸಿಬ್ಬಂದಿಗಳು

Suddi Udaya

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 15ನೇ ವರ್ಷದ ಸಾಮೂಹಿಕ ವಿವಾಹವಧು-ವರರ ವೈಭವದ ದಿಬ್ಬಣ ಮೆರವಣಿಗೆಗೆ ಚಾಲನೆ,

Suddi Udaya

ಶಿಶಿಲ: ಕೊಳ್ಕೆಬೈಲು ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಸುಗುಣ ಕುಮಾರಿ ಸೇವಾ ನಿವೃತ್ತಿ

Suddi Udaya

ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ದೆಹಲಿಯಲ್ಲಿ ಭೇಟಿಯಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ

Suddi Udaya

ಆ.18 ರ ದೇಶವ್ಯಾಪಿ ಕಾರ್ಮಿಕ ಪ್ರತಿಭಟನೆಗೆ ಬೆಳ್ತಂಗಡಿ ತಾಲೂಕಿನಿಂದ ಬೆಂಬಲ

Suddi Udaya
error: Content is protected !!